Select Your Language

Notifications

webdunia
webdunia
webdunia
webdunia

ಯುವತಿ ಅಪಹರಣ ಯತ್ನ: ಹರಿಯಾಣಾದ ಕೀಚಕ ವಿಕಾಸ್ ಬರಾಲಾ ಅರೆಸ್ಟ್

ಯುವತಿ ಅಪಹರಣ ಯತ್ನ: ಹರಿಯಾಣಾದ ಕೀಚಕ ವಿಕಾಸ್ ಬರಾಲಾ ಅರೆಸ್ಟ್
ಚಂಡೀಗಢ್ , ಬುಧವಾರ, 9 ಆಗಸ್ಟ್ 2017 (15:28 IST)
ಯುವತಿ ವರ್ನಿಕಾಗೆ ಕಿರುಕುಳ ನೀಡಿದ ಆರೋಪಿ ವಿಕಾಸ್ ಬರಾಲಾನನ್ನು ಪೊಲೀಸರು ಬಂಧಿಸಿ ವಿಚಾರಣೆ ನಡೆಸಿದ್ದಾರೆ.

ಆರೋಪಿ ವಿಕಾಸ್, ಯುವತಿ ವರ್ನಿಕಾ ಅವರನ್ನು ಅಪಹರಿಸುವ ಉದ್ದೇಶದಿಂದ ಕಂದು ಕಾರನ್ನು ಹಿಂಬಾಲಿಸುತ್ತಿರುವ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿರುವುದು ಕಂಡ ಪೊಲೀಸರು ಆತನನ್ನು ವಶಕ್ಕೆ ತೆಗೆದುಕೊಂಡಿದ್ದಾರೆ.  
 
 ವಿಕಾಸ್ ಹರಿಯಾಣಾ ಬಿಜೆಪಿ ರಾಜ್ಯಾಧ್ಯಕ್ಷ ಸುಭಾಷ್ ಬರಾಲಾ ಅವರ ಪುತ್ರರಾಗಿದ್ದರಿಂದ ಪೊಲೀಸರ ತೀವ್ರ ತೆರೆನಾದ ಒತ್ತಡ ಎದುರಾಗಿತ್ತು. ಆರೋಪಿಯನ್ನು ವಿಚಾರಣೆ ನಡೆಸಿ ಒಂದೇ ಗಂಟೆಯಲ್ಲಿ ಜಾಮೀನು ನೀಡಿರುವುದು ದೇಶಾದ್ಯಂತ ಆಕ್ರೋಶಕ್ಕೆ ಕಾರಣವಾಗಿತ್ತು.
 
 ವಿಕಾಸ್ ಜತೆ ಅಂದು ಕಾರಿನಲ್ಲಿದ್ದ ಆತನ ಸ್ನೇಹಿತ ಆಶೀಶ್‌ನನ್ನು ವಶಕ್ಕೆ ತೆಗೆದುಕೊಂಡಿರುವ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

Share this Story:

Follow Webdunia kannada

ಮುಂದಿನ ಸುದ್ದಿ

ಭೂತಾನ್ ಹೆಸರಲ್ಲಿ ಬೆಂಕಿ ಇಡಲು ಮುಂದಾದ ಚೀನಾ..!