Publish Date: Sat, 26 Aug 2017 (11:34 IST)
Updated Date: Sat, 26 Aug 2017 (12:05 IST)
ನವದೆಹಲಿ: ದೇರಾ ಮುಖ್ಯಸ್ಥ ರಾಮ್ ರಹೀಂ ಸಿಂಗ್ ಬಂಧನದ ಬಳಿಕ ಹರಿಯಾಣದಲ್ಲಿ ನಡೆದ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಕ್ರಿಕೆಟಿಗ ಗೌತಮ್ ಗಂಭೀರ್ ಕಿಡಿ ಕಾರಿದ್ದಾರೆ.
ಈ ಬಗ್ಗೆ ಖಡಕ್ ಟ್ವೀಟ್ ಮಾಡಿರುವ ಗಂಭೀರ್, ‘ರಾಮ್ ರಹೀಂ ಇಂದು ಮನುಷ್ಯ ಮತ್ತು ಅವನ ದುಷ್ಪರಿಣಾಮಗಳ ಬಗ್ಗೆ ಯೋಚಿಸುತ್ತಿರಬಹುದು! ಧರ್ಮವನ್ನು ಮಾರ್ಕೆಟಿಂಗ್ ಮಾಡುತ್ತಿರುವುದಕ್ಕೆ ಪಕ್ಕಾ ಉದಾಹರಣೆ!’ ಎಂದು ಗಂಭೀರ್ ವ್ಯಂಗ್ಯವಾಗಿ ಟೀಕಿಸಿದ್ದಾರೆ.
ಇದಕ್ಕಿಂತ ಮೊದಲೂ ಹಲವು ಬಾರಿ ದೇಶದ ಹಲವು ಪ್ರಮುಖ ವಿಷಯಗಳ ಬಗ್ಗೆ ನೇರ ಅಭಿಪ್ರಾಯ ಹೇಳಲು ಗಂಭೀರ್ ಹಿಂದು ಮುಂದು ನೋಡಿಲ್ಲ. ಈಗಲೂ ಅತ್ಯಾಚಾರ ಆರೋಪದಲ್ಲಿ ಜೈಲು ಸೇರಿರುವ ಬಾಬಾ ಅನುಯಾಯಿಗಳೆನಿಸಿಕೊಂಡವರ ಹಿಂಸಾಚಾರದ ಬಗ್ಗೆ ಕಿಡಿ ಕಾರಿದ್ದಾರೆ.