Publish Date: Fri, 10 Jul 2026 (09:58 IST)
Updated Date: Fri, 10 Jul 2026 (10:01 IST)
ರಸ್ತೆಯಲ್ಲಿ ಹೋಗುವಾಗ ಮೊಬೈಲ್ ನೋಡುತ್ತಾ ಸಾಗುವ ಅಭ್ಯಾಸ ಅನೇಕರಿಗಿರುತ್ತದೆ. ಹಾಗಿದ್ದರೆ ಇದು ಎಷ್ಟು ಡೇಂಜರ್ ಎಂದು ತಿಳಿಯಲು ಈ ವಿಡಿಯೋವನ್ನು ತಪ್ಪದೇ ವೀಕ್ಷಿಸಿ.
ಈ ಘಟನೆ ನಡೆದಿರುವುದು ವಿಜಯವಾಡದಲ್ಲಿ. ರಸ್ತೆಯಲ್ಲಿ ನಡೆಯುತ್ತಾ ಮೊಬೈಲ್ ಫೋನ್ ವೀಕ್ಷಿಸುತ್ತಿದ್ದ ವ್ಯಕ್ತಿಯೊಬ್ಬ ವೇಗವಾಗಿ ಬಂದ ಸಾರಿಗೆ ಬಸ್‌ಗೆ ಸಿಲುಕಿ ಸ್ಥಳದಲ್ಲೇ ಪ್ರಾಣ ಕಳೆದುಕೊಂಡಿದ್ದಾನೆ. ಈ ರಕ್ತಸಿಕ್ತ ಹಾಗೂ ಭೀಕರ ಘಟನೆಯ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುವ ಮೂಲಕ ಸಾರ್ವಜನಿಕರಲ್ಲಿ ತೀವ್ರ ಆತಂಕ ಮೂಡಿಸಿವೆ.
ಒಡಿಶಾ ಮೂಲದ ಬಾಲು ಸಾಹು ಎಂಬ ವ್ಯಕ್ತಿ ಬಸ್ ನಿಲ್ದಾಣದ ಪ್ರಮುಖ ರಸ್ತೆ ಭಾಗದಲ್ಲಿ ತನ್ನ ಜೇಬಿನಿಂದ ಮೊಬೈಲ್ ಫೋನ್ ತೆಗೆದು ನೋಡುತ್ತಾ ಸಾಗುತ್ತಿದ್ದನು. ಮೊಬೈಲ್‌ನತ್ತಲೇ ಗಮನ ಹರಿಸಿದ್ದರಿಂದ ಎದುರಿನಿಂದ ಬರುತ್ತಿದ್ದ ವಾಹನದ ಮುನ್ಸೂಚನೆ ಆತನಿಗೆ ಸಿಗಲಿಲ್ಲ. ಅದೇ ಸಮಯದಲ್ಲಿ ಬಂದ ಆಂಧ್ರಪ್ರದೇಶ ರಾಜ್ಯ ಸಾರಿಗೆ ಸಂಸ್ಥೆಯ ಬಸ್ ಆತನಿಗೆ ಪ್ರಬಲವಾಗಿ ಢಿಕ್ಕಿ ಹೊಡೆದಿದೆ. ಬಸ್‌ನ ಚಕ್ರಕ್ಕೆ ಸಿಲುಕಿದ ಆತ ತೀವ್ರ ಗಾಯಗೊಂಡು ಸ್ಥಳದಲ್ಲೇ ಮೃತಪಟ್ಟಿದ್ದಾನೆ.
ಘಟನೆ ಸಂಬಂಧ ಕೃಷ್ಣಲಂಕಾ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಚಾಲಕನ ನಿರ್ಲಕ್ಷ್ಯ ಹಾಗೂ ಪಾದಚಾರಿಯ ಗಮನ ಕೊರತೆ ಎರಡೂ ಕೋನಗಳಲ್ಲಿ ತನಿಖೆ ನಡೆಸುತ್ತಿದ್ದಾರೆ.
About Writer
ಕೃಷ್ಣವೇಣಿ ಕೆ
Completed bachelor degree in Journalism and communication in SDMC Ujire. 15 years of experience as journalist. Worked as sub editor and reporter. Specialties in sports, politics and entertainment.....
ಮತ್ತಷ್ಟು ಓದಿ