Publish Date: Tue, 24 Mar 2026 (16:41 IST)
Updated Date: Tue, 24 Mar 2026 (16:45 IST)
ನಾಯಿ, ಬೆಕ್ಕುಗಳನ್ನು ಪ್ರೀತಿ ಮಾಡುವಂತೆ ಈ ತಾತನಿಗೆ ಇಲಿಗಳನ್ನು ಕಂಡರೆ ಎಂಥಾ ಅಕ್ಕರೆ ಗೊತ್ತಾ? ಇಲಿಗಳ ಜೊತೆ ತಾತನ ಒಡನಾಟದ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಸಾಮಾನ್ಯವಾಗಿ ಮನುಷ್ಯರು ನಾಯಿ, ಬೆಕ್ಕು, ಗೋವುಗಳನ್ನು ಮನೆಯಲ್ಲಿ ಸಾಕುತ್ತಾರೆ. ಮತ್ತೆ ಕೆಲವರು ಪಕ್ಷಿಗಳನ್ನು ಸಾಕಬಹುದು. ಇನ್ನು ಕೆಲವರು ಬೀದಿಯಲ್ಲಿರುವ ನಾಯಿಗಳ ಬಗ್ಗೆ ಕರುಣೆಯಿಂದ ಆಹಾರ ಹಾಕಿ ತಮ್ಮ ಪ್ರೀತಿ ತೋರಿಸಬಹುದು.
ಆದರೆ ಈ ತಾತ ಅವರೆಲ್ಲಗಿಂತ ಡಿಫರೆಂಟ್. ನಾವೆಲ್ಲರೂ ಇಲಿ ಎಂದರೆ ಅಸಹ್ಯ ಪ್ರಾಣಿ ಎಂಬಂತೆ ನೋಡುತ್ತೇವೆ. ಕಂಡಲ್ಲಿ ಅದನ್ನು ಕೊಂದು ಹಾಕಿಬಿಡುತ್ತೇವೆ. ಆದರೆ ಈ ತಾತ ಅದಕ್ಕೆ ತದ್ವಿರುದ್ಧ. ಇಲಿಗಳನ್ನು ಕಂಡರೆ ತಾತನಿಗೆ ವಿಪರೀತ ಅಕ್ಕರೆ.
ಇತರೆ ಮೂಕ ಪ್ರಾಣಿಗಳಂತೆ ಇಲಿಗಳನ್ನೂ ಕರೆದು ಮಾತನಾಡಿಸುತ್ತಾ ಆಹಾರ ನೀಡುತ್ತಾರೆ. ಆ ಇಲಿಗಳೂ ತಾತನಿಗೆ ಎಷ್ಟು ಹೊಂದಿಕೊಂಡಿವೆ ಎಂದರೆ ತಾತ ಆಹಾರ ಕೊಡುವಾಗ ನಿಲ್ಲು ಎಂದರೆ ನಿಂತು ಆಹಾರ ಪಡೆದುಕೊಳ್ಳುತ್ತವೆ. ಇಲ್ಲಿ ಬಾ ಎಂದರೆ ತಾತ ಬೆರಳು ತೋರಿಸಿದಲ್ಲಿ ಬಂದು ನಿಲ್ಲುತ್ತವೆ. ಈ ವಿಡಿಯೋ ಇಲ್ಲಿದೆ ನೋಡಿ.