Publish Date: Mon, 23 Mar 2026 (16:50 IST)
Updated Date: Mon, 23 Mar 2026 (16:53 IST)
ಬೆಳ್ತಂಗಡಿ: ತಾಲ್ಲೂಕಿನ ಅಳದಂಗಡಿಯಲ್ಲಿ ತೋಟವೊಂದರಲ್ಲಿ ಕಾಣಿಸಿಕೊಂಡ ಬೃಹತ್ ಕಾಳಿಂಗ ಸರ್ಪವೊಂದು ಪತ್ತೆಯಾಗಿದೆ. ಇನ್ನೂ ಅದನ್ನು ಸೆರೆಹಿಡಿಯುವ ವೇಳೆ ಅದು ಉರಗತಜ್ಞನ ಮೇಲೆ ಆಕ್ರಮಣಕಾರಿಯಾಗಿ ದಾಳಿ ನಡೆಸಲು ಯತ್ನಿಸಿದೆ.
ಆದರೆ ಉರಗ ತಜ್ಞ ಚಾಣಕ್ಷತನದಿಂದ ಬೃಹತ್ ಕಾಳಿಂಗವನ್ನು ಸೆರೆಹಿಡಿಯುವಲ್ಲಿ ಸಕ್ಸಸ್ ಆಗಿದ್ದಾನೆ. ಹಾವು ಸೆರೆ ಹಿಡಿಯುವ ವಿಡಿಯೋವನ್ನು ಅಲ್ಲೇ ಇದ್ದ ವ್ಯಕ್ತಿಯೊಬ್ಬರು ಮಾಡಿದ್ದಾರೆ.
ಬೆಳ್ತಂಗಡಿ ತಾಲೂಕಿನ ಅಳದಂಗಡಿಯ ವೀರೇಂದ್ರ ಜೈನ್ ಎಂಬವರ ತೋಟದಲ್ಲಿ ಸುಮಾರು 13ಅಡಿ ಉದ್ದದ ಬೃಹತ್ ಗಾತ್ರದ ಕಾಳಿಂಗ ಸರ್ಪ ಪತ್ತೆಯಾಗಿತ್ತು.
ಇದನ್ನು ಗಮನಿಸಿದ ಮನೆಯವರು ತಕ್ಷಣ ಲಾಯಿಲದ ಉರಗ ಸಂರಕ್ಷಕ ಸ್ನೇಕ್ ಅಶೋಕ್ ಕುಮಾರ್ ಅವರಿಗೆ ಮಾಹಿತಿ ನೀಡಿದ್ದಾರೆ. ತಕ್ಷಣ ಸ್ಥಳಕ್ಕಾಗಮಿಸಿದ ಸ್ನೇಕ್ ಅಶೋಕ್ ಕುಮಾರ್ ಅವರು ಬಹಳ ಚಾಕಚಕ್ಯತೆಯಿಂದ ಕಾಳಿಂಗ ಸರ್ಪವನ್ನು ಹಿಡಿದು, ಸುರಕ್ಷಿತವಾಗಿ ಕಾಡಿಗೆ ಬಿಟ್ಟಿದ್ದಾರೆ.