Publish Date: Mon, 23 Mar 2026 (11:42 IST)
Updated Date: Mon, 23 Mar 2026 (11:45 IST)
ಬೆಂಗಳೂರು: ದಾವಣಗೆರೆ, ಬಾಗಲಕೋಟೆ ಎರಡೂ ಕಡೆ ನಾವೇ ಗೆಲ್ಲುತ್ತೇವೆ ಎಂದು ಉಪಚುನಾವಣೆ ಫಲಿತಾಂಶದ ಬಗ್ಗೆ ಬಿಜೆಪಿ ನಾಯಕ ಬಿ ಶ್ರೀರಾಮುಲು ಭವಿಷ್ಯ ನುಡಿದಿದ್ದಾರೆ.
ಮಾಧ್ಯಮಗಳೊಂದಿಗೆ ಮಾತನಾಡಿದ ಬಿ ಶ್ರೀರಾಮುಲು ಎರಡೂ ಕಡೆ ಬಿಜೆಪಿ ಗೆಲ್ಲುವ ಭರವಸೆ ವ್ಯಕ್ತಪಡಿಸಿದ್ದಾರೆ. 30 ವರ್ಷದ ರಾಜಕೀಯ ಜೀವನದಲ್ಲಿ ಸಾಕಷ್ಟು ಉಪಚುನಾವಣೆ ನೋಡಿದ್ದೇನೆ. ಈ ಹಿಂದೆ ಒಂದೇ ಸಮಯಕ್ಕೆ 11 ಉಪಚುನಾವಣೆ ನಡೆದಿತ್ತು. ಆಗ 10 ರಲ್ಲಿ ಬಿಜೆಪಿ ಗೆದ್ದಿದ್ದೆವು. ಈಗಲೂ ಅದೇ ರೀತಿ ನಾವು ಗೆಲ್ತೇವೆ.
ಬಾಗಲಕೋಟೆ, ದಾವಣಗೆರೆ ಎರಡೂ ಕಡೆ ನಾವೇ ಗೆಲ್ತೇವೆ. ಈ ಸರ್ಕಾರವನ್ನು ಜನ ಸೂಕ್ಷ್ಮವಾಗಿ ಗಮನಿಸುತ್ತಿದ್ದಾರೆ. ಈ ಸರ್ಕಾರ ಬಂದ ನಂತರ ಸಮುದಾಯವಾರು, ಜಾತಿವಾರು ವಿಭಜನೆ ಮಾಡುವ ಕೆಲಸ ಮಾಡಿದೆ. ಮೊನ್ನೆ ಬಾಗಲಕೋಟೆ ಶಿವಾಜಿ ಮಹಾರಾಜ ಜಯಂತ್ಯೋತ್ಸವದಲ್ಲಿ ಕಲ್ಲು ತೂರಾಟ ನಡೆಸಿದ್ರು. ಮದ್ದೂರಿನಲ್ಲಿ ಗಣೇಶೋತ್ಸವ ಸಂದರ್ಭದಲ್ಲಿ ಕಲ್ಲು ತೂರಾಟ ನಡೆಸಿದ್ದರು. ಬೆಂಗಳೂರಿನಲ್ಲೂ ಅಣ್ಣಮ್ಮ ತಾಯಿ ಜಯಂತಿ ಉತ್ಸವದಲ್ಲೂ ಕಲ್ಲು ತೂರಾಟ ನಡೆಸಿದ್ದರು.
ಇದನ್ನೆಲ್ಲಾ ನೋಡಿದ ಮೇಲೆ ಜನ ಖಂಡಿತಾ ಈ ಬಾರಿ ಜನ ಕಾಂಗ್ರೆಸ್ ನ ಗೆಲ್ಲಿಸಲ್ಲ. ಮುಂದಿನ ಚುನಾವಣೆ ದೃಷ್ಟಿಯಿಂದ ಇಲ್ಲಿಂದಲೇ ಕಾಂಗ್ರೆಸ್ ನ ಕೌಂಟ್ ಡೌನ್ ಆರಂಭವಾಗುತ್ತದೆ ಎಂದು ಬಿ ಶ್ರೀರಾಮುಲು ಹೇಳಿದ್ದಾರೆ.