Daily Horoscope

Select Your Language

Notifications

webdunia
webdunia
webdunia
webdunia

ಇಸ್ರೇಲ್ ಇರಾನ್ ಯುದ್ಧದ ನಡುವೆ ಬ್ಯಾಕ್ ಟು ಬ್ಯಾಕ್ ಮೀಟಿಂಗ್ ನಡೆಸಿದ ಪ್ರಧಾನಿ ಮೋದಿ

Modi meeting
Photo Credit: X
ನವದೆಹಲಿ: ಇಸ್ರೇಲ್ ಇರಾನ್ ನಡುವೆ ಯುದ್ಧ ಮುಂದುವರಿದಿರುವ ಹಿನ್ನಲೆಯಲ್ಲಿ ಪ್ರಧಾನಿ ಮೋದಿ ಭದ್ರತಾ ಸಮಿತಿ ಜೊತೆ ಬ್ಯಾಕ್ ಟು ಬ್ಯಾಕ್ ಮೀಟಿಂಗ್ ನಡೆಸುತ್ತಿದ್ದಾರೆ.

ಇಸ್ರೇಲ್ ಮತ್ತು ಇರಾನ್ ಯುದ್ಧ ಮುಗಿಯುವ ಲಕ್ಷಣ ಕಾಣುತ್ತಿಲ್ಲ. ಇದರಿಂದ ನಮ್ಮ ದೇಶವೂ ತೊಂದರೆ ಅನುಭವಿಸುತ್ತಿದೆ. ಈಗಾಗಲೇ ತೈಲ, ಅನಿಲ, ಕಚ್ಚಾ ವಸ್ತುಗಳು ಸರಿಯಾಗಿ ಪೂರೈಕೆಯಾಗದೇ ತೊಂದರೆ ಎದುರಾಗಿದೆ.

ಇದರ ಬೆನ್ನಲ್ಲೇ ಪ್ರಧಾನಿ ಮೋದಿ ಭದ್ರತಾ ಸಮಿತಿ ಮೀಟಿಂಗ್ ನಡೆಸಿದ್ದಾರೆ. ಯುದ್ಧ ಇನ್ನಷ್ಟು ದಿನ ಮುಂದುವರಿಯಬಹುದು. ಆದರೆ ದೇಶದ ಜನತೆಗೆ ಯಾವುದೇ ಕ್ಷೇತ್ರದಲ್ಲೂ ತೊಂದರೆಗಳು ಎದುರಾಗದಂತೆ ನೋಡಿಕೊಳ್ಳಬೇಕು ಎಂದು ಮೋದಿ ಸೂಚನೆ ನೀಡಿದ್ದಾರೆ.

ರಸಗೊಬ್ಬರ, ಕಚ್ಚಾ ವಸ್ತಗುಳು, ಇಂಧನ ಕೊಲ್ಲಿ ರಾಷ್ಟ್ರಗಳಿಂದ ಆಮದಾಗುತ್ತಿತ್ತು. ಕೊಲ್ಲಿ ರಾಷ್ಟ್ರಗಳು ಯುದ್ಧದಿಂದ ತತ್ತರಿಸಿರುವುದರಿಂದ ನಮಗೂ ಈ ವಸ್ತುಗಳ ಕೊರತೆ ಎದುರಾಗಬಹುದು. ಆದರೆ ಅದನ್ನು ಹೇಗೆ ನಿಭಾಯಿಸಬೇಕು, ಪರ್ಯಾಯ ಮಾರ್ಗಗಳು ಯಾವುವು ಎಂಬ ಬಗ್ಗೆ ಸಭೆಯಲ್ಲಿ ಚರ್ಚಿಸಿದ್ದು ಸಲಹೆ ಸೂಚನೆ ನೀಡಿದ್ದಾರೆ ಎನ್ನಲಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

Video: ಇರಾನ್ ಗೆ ಸಹಾಯ ಮಾಡಲು ಮನೆಯಲ್ಲಿದ್ದ ಚಿನ್ನ, ಹಣ ಕೊಟ್ಟ ಕಾಶ್ಮೀರಿ ಮುಸ್ಲಿಮರು