Publish Date: Mon, 23 Mar 2026 (10:13 IST)
Updated Date: Mon, 23 Mar 2026 (10:19 IST)
ಜಮ್ಮು ಕಾಶ್ಮೀರ: ಇರಾನ್ ಗೆ ಸಹಾಯ ಮಾಡಲು ಕಾಶ್ಮೀರಿ ಮುಸ್ಲಿಮರು ಮನೆಯಲ್ಲಿದ್ದ ಚಿನ್ನ, ಹಣ ಕೊಟ್ಟಿದ್ದಾರೆ. ಈ ವಿಡಿಯೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ.
ಇರಾನ್ ಪರಮೋಚ್ಛ ನಾಯಕ ಆಯತೊಲ್ಲಾ ಖಮೇನಿಯನ್ನು ಇಸ್ರೇಲ್-ಅಮೆರಿಕಾ ಪಡೆಗಳು ಹತ್ಯೆ ಮಾಡಿದಾಗ ಭಾರತದಲ್ಲೂ ಮುಸ್ಲಿಮರು ಬೀದಿಗಳಿದು ಪ್ರತಿಭಟನೆ ನಡೆಸಿದ್ದರು. ಇದೀಗ ಕಾಶ್ಮೀರಿಗರು ನೇರವಾಗಿ ಇರಾನ್ ಗೆ ಸಹಾಯ ಮಾಡಲು ಮುಂದಾಗಿದ್ದಾರೆ.
ಕಾಶ್ಮೀರದ ಹಲವು ಕಡೆ ಈಗ ಬೀದಿ ಬೀದಿಯಲ್ಲಿ ಶಿಯಾ ಮುಸ್ಲಿಂ ಪಂಗಡದವರು ಯುದ್ಧ ಪೀಡಿತ ಇರಾನ್ ಜನರ ನೆರವಿಗಾಗಿ ನಗ-ನಗದು ಸಂಗ್ರಹ ಮಾಡುತ್ತಿದ್ದಾರೆ. ಮನೆಯಲ್ಲಿದ್ದ ಚಿನ್ನ, ಹಣವನ್ನು ಮುಸ್ಲಿಮರು ದೇಣಿಗೆಯಾಗಿ ನೀಡುತ್ತಿದ್ದಾರೆ.
ಈ ವಿಡಿಯೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಈ ಹಿಂದೆ ಆಪರೇಷನ್ ಸಿಂಧೂರ ಸಮಯದಲ್ಲಿ ನಮ್ಮ ದೇಶದ ಸೈನಿಕರಿಗೆ ಈ ರೀತಿ ಸಹಾಯ ಮಾಡಲು ಬಂದಿಲ್ಲ. ಈಗ ಬೇರೊಂದು ದೇಶಕ್ಕೆ ಸಹಾಯ ಮಾಡಲು ಮುಂದಾಗುತ್ತಿದ್ದಾರೆ ಎಂದು ಟೀಕಿಸಿದ್ದಾರೆ.