Publish Date: Tue, 24 Mar 2026 (15:54 IST)
Updated Date: Tue, 24 Mar 2026 (16:05 IST)
ಬೀದರ್: ಆನ್‌ಲೈನ್ ಗೇಮ್ ಚಟದಿಂದ ಹಣ ಕಳೆದುಕೊಂಡು ಸಾಲದ ಸುಳಿಗೆ ಸಿಲುಕಿದ್ದ ಎಂಬಿಬಿಎಸ್ ಅಂತಿಮ ವರ್ಷದ ವಿದ್ಯಾರ್ಥಿ ಸಾವಿಗೆ ಶರಣಾದ ಘಟನೆ ಬೀದರ್ ವೈದ್ಯಕೀಯ ವಿಜ್ಞಾನ ಸಂಸ್ಥೆಯ ಕೊಠಡಿಯಲ್ಲಿ ನಡೆದಿದೆ.
ಆತ್ಮಹತ್ಯೆಗೆ ಶರಣಾದ ಯುವಕನನ್ನು ಕಲಬುರಗಿ ಜಿಲ್ಲೆ ಚಿಂಚೋಳಿ ತಾಲ್ಲೂಕಿನ ಬಾಲತ್ಯಾ ತಾಂಡ ನಿವಾಸಿ ಅನಿಷ್ಕಾರ್ ಚವಾಣ್ (21)ಎಂದು ಗುರುತಿಸಲಾಗಿದೆ.
ಸೋಮವಾರ ತಡರಾತ್ರಿ ಹಾಸ್ಟೆಲ್ ಕೊಠಡಿಯ ಫ್ಯಾನಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು, ಮಂಗಳವಾರ ಬೆಳಿಗ್ಗೆ ಘಟನೆ ಬೆಳಕಿಗೆ ಬಂದಿದೆ.
ಇನ್ನೂ ಆನ್‌ಲೈನ್ ಗೇಮ್ ಚಟದಿಂದ ಅನಿಷ್ಕಾರ್₹80ಸಾವಿರ ಕಳೆದುಕೊಂಡಿದ್ದ. ಇದಕ್ಕೂ ಮೊದಲು ಅದರಲ್ಲಿ ಆಟವಾಡಿ ಸೋತಿದ್ದ. ಸಾಲ ಕೊಟ್ಟವರು ಹಿಂತಿರುಗಿಸುವಂತೆ ಕೇಳುತ್ತಿದ್ದರು. ಇದರಿಂದ ಒತ್ತಡಕ್ಕೆ ಒಳಗಾಗಿ ಆತ್ಮಹತ್ಯೆಗೆ ಶರಣಾಗಿರುವ ಸಾಧ್ಯತೆ ಇದೆ ಎಂದು ಮೇಲ್ನೋಟಕ್ಕೆ ಕಂಡುಬಂದಿದೆ ಎಂದು ಪೊಲೀಸ್ ಮೂಲಗಳಿಂದ ತಿಳಿದುಬಂದಿದೆ.
ವಿದ್ಯಾರ್ಥಿಯ ಹಿರಿಯ ಸಹೋದರ ಕೂಡ ಬ್ರಿಮ್ಸ್‌ನಲ್ಲಿ ಎಮ್‌ಬಿಬಿಎಸ್‌ನಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ. ಇವರ ಹಿರಿಯ ಸಹೋದರಿ ಬ್ರಿಮ್ಸ್‌ನಲ್ಲೇ ಎಮ್‌ಬಿಬಿಎಸ್ ಮುಗಿಸಿ, ಬೆಂಗಳೂರಿನಲ್ಲಿ ಎಮ್.ಡಿ. ಮಾಡುತ್ತಿದ್ದಾರೆ ಎಂದು ತಿಳಿದು ಬಂದಿದೆ.