Publish Date: Tue, 24 Mar 2026 (08:37 IST)
Updated Date: Tue, 24 Mar 2026 (08:40 IST)
ಬೆಂಗಳೂರು: ರಾಜ್ಯದಲ್ಲಿ ಇಷ್ಟು ದಿನ ಬೇಸಿಗೆಯ ಮಳೆಯ ಅಬ್ಬರವಾಗಿತ್ತು. ಆದರೆ ಈ ವಾರದಿಂದ ಮತ್ತೆ ಹವಾಮಾನದಲ್ಲಿ ಬದಲಾವಣೆಯಾಗಲಿದ್ದು ಇಂದಿನ ಹವಾಮಾನ ಎಚ್ಚರಿಕೆಯನ್ನು ತಪ್ಪದೇ ಗಮನಿಸಿ.
ಕಳೆದ ವಾರವೇನೋ ರಾಜ್ಯದ ಹಲವು ಭಾಗಗಳಲ್ಲಿ ಮಳೆಯಾಗಿದ್ದರಿಂದ ಕೊಂಚ ಮಟ್ಟಿಗೆ ವಾತಾವರಣ ತಂಪಾಗಿತ್ತು. ಕಳೆದ ವಾರ ಸರಾಸರಿ ಗರಿಷ್ಠ ತಾಪಮಾನ 32 ಡಿಗ್ರಿಯಷ್ಟು ಇತ್ತಷ್ಟೇ. ಆದರೆ ಈ ವಾರದಿಂದ ತಾಪಮಾನದಲ್ಲಿ ಏರಿಕೆಯಾಗಲಿದೆ.
ಇಂದು ಕೆಲವು ಜಿಲ್ಲೆಗಳಿಗೆ ಮಾತ್ರ ಸಣ್ಣ ಮಳೆಯ ಸೂಚನೆಯಿದೆ. ಆದರೂ ಇಂದು ತಾಪಮಾನದಲ್ಲಿ ಏರಿಕೆ ಕಂಡುಬರಲಿದೆ. ಇಂದು ರಾಜ್ಯದ ಗರಿಷ್ಠ ತಾಪಮಾನ 33 ಡಿಗ್ರಿಯಷ್ಟು ಕಂಡುಬರಲಿದ್ದು, ಕನಿಷ್ಠ ತಾಪಮಾನ 21 ಡಿಗ್ರಿಯಷ್ಟಾಗಲಿದೆ.
ಬಹುತೇಕ ಕಡೆ ಉರಿಬಿಸಿಲು, ಸೆಖೆಯ ವಾತಾವರಣವಿರಲಿದೆ. ಹಾಗಿದ್ದರೂ ಚಿಕ್ಕಮಗಳೂರು,ಕೊಡಗು, ಗದಗ, ಕೊಪ್ಪಳ, ಹಾವೇರಿ, ದಾವಣಗೆರೆ ಜಿಲ್ಲೆಗಳಲ್ಲಿ ಇಂದು ಸಣ್ಣ ಮಳೆಯಾಗುವ ಸೂಚನೆಯಿದೆ. ಉಳಿದ ಜಿಲ್ಲೆಗಳಲ್ಲಿ ಭಾಗಶಃ ಮೋಡ ಕವಿದ ಅಥವಾ ಬಿಸಿಲಿನ ವಾತಾವರಣ ಮುಂದುವರಿಯಲಿದೆ.