Publish Date: Sat, 21 Mar 2026 (08:43 IST)
Updated Date: Sat, 21 Mar 2026 (08:46 IST)
ಬೆಂಗಳೂರು: ಕಳೆದ ನಾಲ್ಕೈದು ದಿನಗಳಿಂದ ರಾಜ್ಯದಲ್ಲಿ ಅಲ್ಲಲ್ಲಿ ಮಳೆಯಾಗುತ್ತಿದೆ. ವಾರಂತ್ಯಕ್ಕೆ ರಾಜ್ಯದಲ್ಲಿ ಮಳೆಯಾಗಲಿದೆಯಾ ಇಲ್ಲಿದೆ ಹವಾಮಾನ ವರದಿ.
ದಕ್ಷಿಣ ಕನ್ನಡ, ಬೆಂಗಳೂರು, ಕರ್ನಾಟಕದ ಉತ್ತರ ಭಾಗಗಳಲ್ಲಿ ಗುಡುಗು ಸಹಿತ ಆಲಿಕಲ್ಲು ಮಳೆಯಾಗಿತ್ತು. ಬೇಸಿಗೆಯ ಈ ಮಳೆ ರೈತರಿಗೆ ಸಂಕಷ್ಟ ತಂದಿತ್ತರೆ ಬಿಸಿಲ ಬೇಗೆಯಿಂದ ತತ್ತರಿಸಿದವರಿಗೆ ತಂಪೆರಚಿತ್ತು.
ಹವಾಮಾನ ವರದಿಗಳ ಪ್ರಕಾರ ಈ ವಾರಂತ್ಯದಲ್ಲೂ ಮಳೆಯಾಗುವ ಸಾಧ್ಯತೆಯಿದೆ. ಅದರಲ್ಲೂ ನಾಳೆ ರಾಜ್ಯದ ಈ ಜಿಲ್ಲೆಗಳಿಗೆ ಮಳೆಯ ಸೂಚನೆಯಿದೆ. ಬೆಂಗಳೂರು, ರಾಮನಗರ ಜಿಲ್ಲೆಗಳಲ್ಲಿ ನಾಳೆ ಮಳೆಯಾಗುವ ಸಾಧ್ಯತೆಯಿದೆ.
ಉಳಿದ ಜಿಲ್ಲೆಗಳಲ್ಲಿ ಭಾಗಶಃ ಮೋಡ ಕವಿದ ವಾತಾವರಣ ಕಂಡುಬರುವುದು. ರಾಜ್ಯದಲ್ಲಿ ಇಂದು ಮತ್ತು ನಾಳೆ ಗರಿಷ್ಠ ತಾಪಮಾನ 31-32 ಡಿಗ್ರಿಯಷ್ಟು ಕಂಡುಬರಲಿದೆ. ಕನಿಷ್ಠ ತಾಪಮಾನ ಸರಾಸರಿ 21 ಡಿಗ್ರಿಯಷ್ಟು ಕಂಡುಬರುವುದು.