Webdunia - Bharat's app for daily news and videos

Install App

ರೈಲಿನ ಸ್ಲೀಪರ್ ಸೀಟ್ ನಲ್ಲಿ ಕಪಿ ಮಹಾಶಯ: ಪ್ರಯಾಣಿಕರಿಗೆ ಫುಲ್ ಪೀಕಲಾಟ Video

ಕೃಷ್ಣವೇಣಿ ಕೆ
ಶನಿವಾರ, 22 ಆಗಸ್ಟ್ 2026 (15:14 IST)
ರೈಲಿನಲ್ಲಿ ಸ್ಲೀಪರ್ ಸಿಟ್ ಬುಕ್ ಮಾಡಬೇಕೆಂದರೆ ಸೀಟ್ ಸಿಗಲು ಪರದಾಡಬೇಕಾಗುತ್ತದೆ. ಆದರೆ ಇಲ್ಲೊಂದು ಕಪಿಮಹಾಶಯ ಮಾಡಿದ ಕೆಲಸ ಎಲ್ಲರ ಮುಖದಲ್ಲಿ ನಗು ತರಿಸಿದೆ.

ಭಾರತೀಯ ರೈಲ್ವೆಯಲ್ಲಿ ಒಂದು ಕನ್ಫರ್ಮ್ ಸೀಟ್ ಪಡೆಯಲು ಸಾಮಾನ್ಯ ನಾರಿಕರು ತಿಂಗಳುಗಟ್ಟಲೆ ಕಾಯಬೇಕಾದ ಸ್ಥಿತಿಯಿದೆ. ವೇಟಿಂಗ್ ಲಿಸ್ಟ್, ತತ್ಕಾಲ್ ಬುಕಿಂಗ್ ಎಂದು ಹೆಣಗಾಡಿದರೂ ಸೀಟು ಸಿಗದೆ ಸಾರ್ವಜನಿಕರು ಪರದಾಡುತ್ತಾರೆ. ಆದರೆ, ನಿನ್ನೆ 'ಲಕ್ಷ್ಮಿ ಎಕ್ಸ್‌ಪ್ರೆಸ್' ರೈಲಿನಲ್ಲಿ ನಡೆದ ಘಟನೆಯೊಂದು ಭಾರತೀಯ ರೈಲ್ವೆಯ ನಿಜವಾದ 'ರಾಜ' ಯಾರು ಎಂಬುದನ್ನು ಸಾಬೀತುಪಡಿಸಿದೆ!

ರೈಲು ಚಿಪಿಯಾನಾ ಬಳಿ ತಲುಪುತ್ತಿದ್ದಂತೆ, ದಿಢೀರನೆ ಮರ್ಕಟ ಮಹಾರಾಯನೊಬ್ಬ ಮಾಸ್ ಎಂಟ್ರಿ ಕೊಟ್ಟಿತು. ಯಾವುದೇ ಟಿಕೆಟ್ ಇಲ್ಲದೆ, ಮುಂಗಡ ಕಾಯ್ದಿರಿಸುವಿಕೆಯ ಹಂಗೂ ಇಲ್ಲದೆ ನೇರವಾಗಿ ಸ್ಲೀಪರ್ ಕೋಚ್‌ಗೆ ಬಂದಿಳಿದ ಈ 'ವಿಐಪಿ', ರಾಜಾರೋಷವಾಗಿ ಸೀಟ್ ಒಂದನ್ನು ಆಕ್ರಮಿಸಿಕೊಂಡು ಕುಳಿತಿತು. ಯಾವುದೇ ಟಿಕೆಟ್ ಪರಿಶೀಲಕ (TTE) ಬಂದು ದಂಡ ವಿಧಿಸುವ ಧೈರ್ಯ ತೋರದಂತೆ ತಮ್ಮದೇ ಆದ ಶೈಲಿಯಲ್ಲಿ ವಾನರರಾಯ ಆಸನ ಅಲಂಕರಿಸಿತ್ತು.

ಸಾಮಾನ್ಯ ಜನರು ಒಂದು ಸೀಟಿಗಾಗಿ ಪರದಾಡುತ್ತಿರುವಾಗ, ಇಂತಹ 'ವಿಐಪಿ' ಪ್ರಯಾಣಿಕರು ಯಾವುದೇ ಶುಲ್ಕವಿಲ್ಲದೆ ಪ್ರಯಾಣಿಸುವುದು ಸರಿಯೇ ಅಥವಾ ಟಿಟಿಇ ಇವರಿಗೂ ಒಂದು ಟಿಕೆಟ್ ಹರಿದು ಕೊಟ್ಟು ದಂಡ ವಸೂಲಿ ಮಾಡಬೇಕಿತ್ತೇ? ಪ್ರಸ್ತುತ ಈ ಮುದ್ದಾದ ಹಾಗೂ ತಮಾಷೆಯ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗುತ್ತಿದ್ದು, ಪ್ರಯಾಣಿಕರಿಗೆ ಭರಪೂರ ಮನರಂಜನೆ ನೀಡಿದೆ.


pic.twitter.com/t2dPXoQC8J

 

— Nunu (@Dreams_realites) August 22, 2026

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಅನ್ಯಾಯವಾಗಿ ಜೀವವೇ ಕಳೆದುಕೊಂಡ ಬೈಕ್ ಸವಾರ… ತ್ರಿಶ್ಶೂರ್ ನಲ್ಲಿ ನಡೆದ ಘನಘೋರ ದುರಂತವಿದು Video

ಬಡ ವ್ಯಕ್ತಿ ತನ್ನ ಅಳಲು ತೋಡಿಕೊಳ್ಳುತ್ತಿದ್ದರೆ ಜಿಲ್ಲಾಧಿಕಾರಿ ಐಫೋನ್ ಸ್ಕ್ರೋಲಿಂಗ್ ಮಾಡೋದರಲ್ಲೇ ಬ್ಯುಸಿ Video

ಜೈಲಿನಲ್ಲಿದ್ದರೂ… ಪ್ರಜ್ವಲ್ ರೇವಣ್ಣ ಬಗ್ಗೆ ಮತ್ತಷ್ಟು ಶಾಕಿಂಗ್ ವಿಚಾರಗಳು ಬಯಲು

Gold Price: ಚಿನ್ನದ ದರ ಇಂದು ಎಷ್ಟಾಗಿದೆ ನೋಡಿ

ಹೇಳಿದಷ್ಟು ಸಂಬಳ ಕೊಡದೇ ಬಡ ಕಾರ್ಮಿಕನಿಗೆ ವಂಚನೆ: ಮೇಲಧಿಕಾರಿ ಮುಖಕ್ಕೆ ಬಳೆ ಬಿಸಾಕಿ ಆತ ಹೇಳಿದ್ದೇನು ನೋಡಿ Video

ಮುಂದಿನ ಸುದ್ದಿ
Show comments