Select Your Language

Notifications

webdunia
webdunia
webdunia
webdunia

ವೀಡಿಯೋ ಲೀಕ್ ಪ್ರಕರಣ : ಹೆದರಿ ವೀಡಿಯೋ ಮಾಡಿದ್ಲು ಸಹಪಾಠಿ

ವೀಡಿಯೋ ಲೀಕ್ ಪ್ರಕರಣ : ಹೆದರಿ ವೀಡಿಯೋ ಮಾಡಿದ್ಲು ಸಹಪಾಠಿ
ಚಂಡೀಗಢ , ಬುಧವಾರ, 21 ಸೆಪ್ಟಂಬರ್ 2022 (06:40 IST)
ಚಂಡೀಗಢ : ಮೊಹಾಲಿಯಲ್ಲಿರುವ ಚಂಡೀಗಢ ವಿವಿಯ ವಿದ್ಯಾರ್ಥಿನಿಯರ ಖಾಸಗಿ ವೀಡಿಯೋ ಲೀಕ್ ಪ್ರಕರಣಕ್ಕೆ ಹೊಸ ಟ್ವಿಸ್ಟ್ ಸಿಕ್ಕಿದೆ.
 
ಸಹ ವಿದ್ಯಾರ್ಥಿನಿಯ ಬಾಯ್ಫ್ರೆಂಡ್ ಬೆದರಿಕೆ ಹಾಕಿದ್ದರಿಂದಲೇ ಇತರ ವಿದ್ಯಾರ್ಥಿನಿಯರ ಖಾಸಗಿ ವೀಡಿಯೋ ಸೆರೆ ಹಿಡಿದು ಹಂಚಿಕೊಂಡಿದ್ದಾಳೆ ಎಂಬ ಸಂಗತಿ ತನಿಖೆ ವೇಳೆ ಬಯಲಾಗಿದೆ.

ಆರೋಪಿಗಳಾದ ಸನ್ನಿ ಮೆಹ್ತಾ ಮತ್ತು ಆತನ ಸ್ನೇಹಿತ ರಂಕಜ್ ವರ್ಮಾ, ಹಾಸ್ಟೆಲ್ನ ಸಾಮಾನ್ಯ ಶೌಚಗೃಹದಲ್ಲಿ ಹಾಸ್ಟೆಲ್ ವಿದ್ಯಾರ್ಥಿನಿಯರ ಬೆತ್ತಲೆ ದೃಶ್ಯಗಳನ್ನು ಚಿತ್ರೀಕರಿಸಿ, ಹಂಚಿಕೊಳ್ಳದಿದ್ದರೇ ನಿನ್ನ ಖಾಸಗಿ ವೀಡಿಯೋಗಳನ್ನ ವೈರಲ್ ಮಾಡುವುದಾಗಿ ಆರೋಪಿ ವಿದ್ಯಾರ್ಥಿನಿಗೆ ಬೆದರಿಕೆ ಹಾಕಿದ್ದರು. ಆದ್ದರಿಂದಲೇ ಸಹ ವಿದ್ಯಾರ್ಥಿನಿ ಇತರರ ಖಾಸಗಿ ವೀಡಿಯೋಗಳನ್ನ ಸೆರೆ ಹಿಡಿದು ಹಂಚಿಕೊಂಡಿದ್ದಾಳೆ ಎಂದು ತಿಳಿದುಬಂದಿದೆ. 

ಈ ಪ್ರಕರಣದಲ್ಲಿ ಪಂಜಾಬ್ ಪೊಲೀಸರು ಮೂವರನ್ನ ಬಂಧಿಸಿದ್ದಾರೆ. ಮೂವರಲ್ಲಿ 23 ವರ್ಷದ ಆರೋಪಿಯೊಬ್ಬ ಬಂಧಿತ ವಿದ್ಯಾರ್ಥಿನಿಯ ಬಾಯ್ಫ್ರೆಂಡ್ ಎಂದು ತಿಳಿದುಬಂದಿದೆ. 31 ವರ್ಷದ ಇನ್ನೊಬ್ಬ ಆರೋಪಿ ಆತನ ಸ್ನೇಹಿತನಾಗಿದ್ದಾನೆ.

Share this Story:

Follow Webdunia kannada

ಮುಂದಿನ ಸುದ್ದಿ

ಸರ್ಕಾರದಿಂದ ಹಿಂದುತ್ವ ಅಜೆಂಡಾ ಪ್ರಚಾರ : ಮೆಹಬೂಬಾ