Select Your Language

Notifications

webdunia
webdunia
webdunia
webdunia

ಸರ್ಕಾರದಿಂದ ಹಿಂದುತ್ವ ಅಜೆಂಡಾ ಪ್ರಚಾರ : ಮೆಹಬೂಬಾ

ಸರ್ಕಾರದಿಂದ ಹಿಂದುತ್ವ ಅಜೆಂಡಾ ಪ್ರಚಾರ : ಮೆಹಬೂಬಾ
ಶ್ರೀನಗರ , ಬುಧವಾರ, 21 ಸೆಪ್ಟಂಬರ್ 2022 (06:26 IST)
ಶ್ರೀನಗರ : ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರವು ಕಾಶ್ಮೀರದಲ್ಲಿ ಹಿಂದುತ್ವ ಅಜೆಂಡಾ ಪ್ರಚಾರ ಮಾಡುತ್ತಿದೆ ಎಂದು ಪೀಪಲ್ಸ್ ಡೆಮಾಕ್ರಟಿಕ್ ಪಾರ್ಟಿ ಮುಖ್ಯಸ್ಥೆ ಮೆಹಬೂಬಾ ಮುಫ್ತಿ  ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ದಕ್ಷಿಣ ಕಾಶ್ಮೀರದ ಕುಲ್ಗಾಮ್ನಲ್ಲಿರುವ ಸರ್ಕಾರಿ ಪ್ರೌಢಶಾಲೆಯ ವಿದ್ಯಾರ್ಥಿಗಳು `ರಘುಪತಿ ರಾಘವ ರಾಜಾ ರಾಂ’ ಹಾಡುತ್ತಿರುವ ವೀಡಿಯೋವನ್ನು  ಟ್ವಿಟರ್ನಲ್ಲಿ ಹಂಚಿಕೊಂಡಿದ್ದ ಮುಫ್ತಿ, ಇದು ಕೇಂದ್ರ ಸರ್ಕಾರದ ಹಿಂದುತ್ವ ಅಜೆಂಡಾವನ್ನು ಸೂಚಿಸುತ್ತದೆ ಎಂದು ಆಕ್ಷೇಪಿಸಿದ್ದಾರೆ. 

`ಧಾರ್ಮಿಕ ವಿದ್ವಾಂಸರನ್ನು ಜೈಲಿಗಟ್ಟುವುದು, ಜಮ್ಮಾ ಮಸೀದಿಯನ್ನು  ಮುಚ್ಚುವುದು ಮತ್ತು ಶಾಲಾ ಮಕ್ಕಳಿಗೆ ಹಿಂದೂ ಸ್ತೋತ್ರ ಹಾಡಲು ನಿರ್ದೇಶಿಸುವುದು ಕಾಶ್ಮೀರದಲ್ಲಿ ಭಾರತ ಸರ್ಕಾರದ ನಿಜವಾದ ಹಿಂದುತ್ವವನ್ನು ಬಿಂಬಿಸಿದೆ ಎಂದು ಮುಫ್ತಿ ಟ್ವೀಟ್ನಲ್ಲಿ ಉಲ್ಲೇಖಿಸಿದ್ದಾರೆ.


Share this Story:

Follow Webdunia kannada

ಮುಂದಿನ ಸುದ್ದಿ

ಸ್ಪೈಸ್‌ ಜೆಟ್‌ನ 80 ಪೈಲಟ್ ಮನೆಗೆ !