Daily Horoscope

Select Your Language

Notifications

webdunia
webdunia
webdunia
webdunia

Video: ಗಂಡನನ್ನು ಕೊಂದು ಟಾಯ್ಲೆಟ್ ನಲ್ಲಿ ಹೂತಿಟ್ಟು ಆಸ್ಕರ್ ಲೆವೆಲ್ ಗೆ ಆಕ್ಟಿಂಗ್: ಉತ್ತರ ಪ್ರದೇಶದ ರೂಬಿ ಕಿಲ್ಲಿಂಗ್ ಕಹಾನಿ ಇಲ್ಲಿದೆ

Uttar Pradesh Ruby
ಆಗ್ರಾ: ಸೋನಂ ರಘುವಂಶಿ, ಸಿಯಾ ಗೋಯಲ್ ಬಳಿಕ ಈಗ ಉತ್ತರ ಪ್ರದೇಶದಲ್ಲಿ ಹೆಂಡತಿಯೊಬ್ಬಳು ಗಂಡನನ್ನು ಕೊಲೆ ಮಾಡಿದ ಭಯಾನಕ ವಿಚಾರ ಹೊರಬಿದ್ದಿದೆ. ರೂಬಿ ಎಂಬ ಮಹಿಳೆ ತನ್ನ ಗಂಡನನ್ನು ಕೊಂದು ಟಾಯ್ಲೆಟ್ ನಲ್ಲಿ ಹೂತು ಹಾಕಿದ ಭಯಾನಕ ಕಹಾನಿ ಇಲ್ಲಿದೆ ನೋಡಿ.

ಈ ಘಟನೆಯು ಆಗ್ರಾದ ಸಿಕಂದ್ರಾದಲ್ಲಿರುವ ಪ್ರಾಚಿ ಟವರ್ ಪೊಲೀಸ್ ಚೌಕಿ ವ್ಯಾಪ್ತಿಯ ರುನಕ್ತಾ ಧಾಮ್ ಕಾಲೋನಿಯಲ್ಲಿ ನಡೆದಿದೆ. ಮೇ 18 ರಂದು ರೂಬಿ ಎಂಬ ಮಹಿಳೆ ಪೊಲೀಸ್ ಠಾಣೆಗೆ ಬಂದು ತನ್ನ ಪತಿ ಸುರೇಂದ್ರ ಕಳೆದ ಕೆಲವು ದಿನಗಳಿಂದ ನಾಪತ್ತೆಯಾಗಿದ್ದಾರೆ ಎಂದು ದೂರು ನೀಡಿದ್ದಳು. ಪೊಲೀಸರು ತಕ್ಷಣ ಹುಡುಕಾಟಕ್ಕೆ ಇಳಿದರು. ಈ ಸಮಯದಲ್ಲಿ ರೂಬಿ ಕೂಡ ಹಗಲು ರಾತ್ರಿ ನಾಟಕವಾಡುತ್ತಾ, ಪೊಲೀಸರೊಂದಿಗೆ ತನ್ನ ಪತಿಯನ್ನು ಹುಡುಕುವಂತೆ ನಟಿಸುತ್ತಿದ್ದಳು. ಸುಮಾರು 45 ದಿನಗಳು ಕಳೆದ ನಂತರ, ಕುಟುಂಬದ ಸದಸ್ಯರು ಪತ್ನಿ ರೂಬಿಯನ್ನು ತೀವ್ರವಾಗಿ ಪ್ರಶ್ನಿಸಿದಾಗ, ಆಕೆ ತನ್ನ ಅಪರಾಧವನ್ನು ಒಪ್ಪಿಕೊಂಡಿದ್ದಾಳೆ.

ತನ್ನ ಪತಿಯ ಪಾಯಸದಲ್ಲಿ ನಿದ್ದೆ ಮಾತ್ರೆಗಳನ್ನು ಬೆರೆಸಿದ್ದಾಗಿ ಪತ್ನಿ ಬಹಿರಂಗಪಡಿಸಿದ್ದಾಳೆ. ಇದರ ಪರಿಣಾಮವಾಗಿ ಆತ ಮೃತಪಟ್ಟಿದ್ದನು. ಆ ಸಮಯದಲ್ಲಿ ಆಕೆಯ ಅತ್ತೆ ಮತ್ತು ಹೆಣ್ಣುಮಕ್ಕಳು ವಾಯು ವಿಹಾರ್‌ನಲ್ಲಿರುವ ಮೈದುನನ ಮನೆಗೆ ಹೋಗಿದ್ದರು. ಕೇವಲ 400 ರೂಪಾಯಿ ಕೊಟ್ಟು ಆಕೆ ಮಣ್ಣನ್ನು ತರಿಸಲು ವ್ಯವಸ್ಥೆ ಮಾಡಿದ್ದಳು. ಬಾತ್ ರೂಮ್ ನೆಲವನ್ನು ಒಡೆದು, ಶವವನ್ನು ಎಳೆದುಕೊಂಡು ಬಂದು ಬಾತ್ ರೂಮ್ ಒಳಗೆ ಹಾಕಿದ್ದಾಳೆ. ಶವವನ್ನು ಬಾತ್ ರೂಮ್‌ನಲ್ಲಿ ಮಲಗಿಸಿ, ಅದರ ಮೇಲೆ ಉಪ್ಪನ್ನು ಸುರಿದು ಮಣ್ಣು ಹಾಕಿದ್ದಾಳೆ.

ಜೂನ್ 19 ರಂದು ಆಕೆ ನೆಲವನ್ನು ಪ್ಲಾಸ್ಟಿಂಗ್ ಮಾಡಲು ಮೇಸ್ತ್ರಿಯೊಬ್ಬನನ್ನು ಕರೆಸಿದ್ದಳು. ನೆಲವು ಒಂದೇ ದಿನದಲ್ಲಿ ಒಣಗಿಹೋಯಿತು. ತದನಂತರ ಆಕೆ ಸ್ವತಃ ತನ್ನ ಮೈದುನನ ಮನೆಗೆ ಹೋಗಿ, ಅಲ್ಲಿಗೆ ತಲುಪಿದ ತಕ್ಷಣ ಸುರೇಂದ್ರ ನಾಲ್ಕು ದಿನಗಳಿಂದ ಮನೆಗೆ ಬಂದಿಲ್ಲ ಎಂದು ನಾಟಕವಾಡಲು ಶುರುಮಾಡಿದ್ದಳು. ಒಮ್ಮೆ ಊಹಿಸಿ ಆಕೆ ಯಾವ ಲೆವೆಲ್ ಗೆ ಆಕ್ಟಿಂಗ್ ಮಾಡಿರಬೇಕು ಎಂದು. ಕೊಲೆ ನಡೆದ 45 ದಿನಗಳ ನಂತರವೂ ಆಕೆ ಪೊಲೀಸರ ಜೊತೆಗೂಡಿ ಆತನನ್ನು ಹುಡುಕುವ ನಾಟಕವಾಡುತ್ತಿದ್ದಳು.

ಬಳಿಕ ಈಕೆಯ ಬಗ್ಗೆ ಅನುಮಾನಗೊಂಡ ಮನೆಯವರು ಪ್ರಶ್ನೆ ಮಾಡಿದಾಗ ವಿಚಾರ ಬೆಳಕಿಗೆ ಬಂದಿದೆ. ಇದೀಗ ಪೊಲೀಸರು ಆಕೆಯನ್ನು ಬಂಧಿಸಿದ್ದಾರೆ. ಬಾತ್ ರೂಂನಲ್ಲಿದ್ದ ಆಕೆಯ ಗಂಡನ ಕಳೇಬರವನ್ನು ಹೊರತೆಗೆಯಲಾಗಿದೆ.


pic.twitter.com/eYzUzso0MV

 

— Priya singh (@priyarajputlive) July 4, 2026

Share this Story:

Follow Webdunia kannada

ಮುಂದಿನ ಸುದ್ದಿ

ಕೋಟಿ ರೂ ಖರ್ಚು ಮಾಡಿ ರಸ್ತೆ ಮಾಡಿದ್ದು ದನ ಸಾಕೋದಿಕ್ಕಾ... ಶಾಸಕ ರವಿ ಸುಬ್ರಹ್ಮಣ್ಯ ರೋಷಾವೇಷ Video