Publish Date: Sat, 04 Jul 2026 (11:36 IST)
Updated Date: Sat, 04 Jul 2026 (11:38 IST)
ದೆಹಲಿ ಮೆಟ್ರೋ ಕೇವಲ ಸಾರ್ವಜನಿಕ ಸಾರಿಗೆಯಾಗಿ ಉಳಿದಿಲ್ಲ, ಬದಲಿಗೆ ಕರಾವಳಿಯಿಲ್ಲದ ಪ್ರೇಮಿಗಳ ತಾಣವಾಗಿ ಮಾರ್ಪಟ್ಟಿದೆ ಎಂಬ ಆರೋಪ ಕೇಳಿಬರುತ್ತಿದೆ. ಇತ್ತೀಚೆಗೆ ಮೆಟ್ರೋ ರೈಲಿನಲ್ಲಿ ಯುವ ಜೋಡಿಯೊಂದು ಸಾರ್ವಜನಿಕವಾಗಿಯೇ ಮಿತಿಮೀರಿ ರೋಮ್ಯಾನ್ಸ್ ಮಾಡಿರುವ ಭೀಕರ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿದ್ದು, ತೀವ್ರ ಚರ್ಚೆಗೆ ಗ್ರಾಸವಾಗಿದೆ.
ದೆಹಲಿ ಮೆಟ್ರೋದಲ್ಲಿ ಪದೇ ಪದೇ ಇಂತಹ ಘಟನೆಗಳು ಆಗುತ್ತಿವೆ ಎಂಬ ಆರೋಪವಿದೆ. ಮೆಟ್ರೋದಲ್ಲಿ ಪ್ರಯಾಣಿಸುವಾಗ ಯುವ ಜೋಡಿಗಳ ರೊಮ್ಯಾನ್ಸ್ ಹಲವು ಬಾರಿ ವೈರಲ್ ಆಗಿದ್ದು ಇದೆ. ಇದೂ ಕೂಡಾ ಅಂತಹದ್ದೇ ವಿಡಿಯೋ ಆಗಿದೆ.
ಮೆಟ್ರೋದಂತಹ ಸಾರ್ವಜನಿಕ ಸಾರಿಗೆಗಳಲ್ಲಿ ಎಲ್ಲಾ ವರ್ಗದ, ವಯಸ್ಸಿನ ಸಾಮಾನ್ಯ ಪ್ರಯಾಣಿಕರು ಪ್ರಯಾಣ ಮಾಡುತ್ತಿರುತ್ತಾರೆ. ಇಂತಹ ಸ್ಥಳದಲ್ಲಿ ಜೋಡಿಯೊಂದು ಬಾಗಿಲ ಬಳಿ ನಿಂತುಕೊಂಡು ಪರಸ್ಪರ ತಬ್ಬಿಕೊಂಡು ಅಸಭ್ಯವಾಗಿ ವರ್ತಿಸುತ್ತಿರುತ್ತದೆ.
ಇದನ್ನು ಅಕ್ಕಪಕ್ಕದ ಪ್ರಯಾಣಿಕರು ನೋಡುತ್ತಿರುತ್ತಾರೆ. ಆದರೆ ಅದರ ಪರಿವೆಯೇ ಇಲ್ಲದಂತೆ ಈ ಜೋಡಿ ಮೈಮರೆತಿರುತ್ತದೆ. ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು ಇವರಿಗೆ ಇಂತಹ ಕೆಲಸ ಮಾಡಲು ನಾಚಿಕೆಯಾಗಲ್ವಾ? ಸಾರ್ವಜನಿಕ ಸ್ಥಳಗಳಲ್ಲಿ ಈ ರೀತಿ ವರ್ತಿಸುವ ಜರೂರತ್ತು ಏನಿದೆ? ಎಂದು ಕಿಡಿ ಕಾರಿದ್ದಾರೆ.
About Writer
ಕೃಷ್ಣವೇಣಿ ಕೆ
Completed bachelor degree in Journalism and communication in SDMC Ujire. 15 years of experience as journalist. Worked as sub editor and reporter. Specialties in sports, politics and entertainment.....
ಮತ್ತಷ್ಟು ಓದಿ