Publish Date: Mon, 27 Jul 2026 (11:14 IST)
Updated Date: Mon, 27 Jul 2026 (11:17 IST)
ನವದೆಹಲಿ: ಅಜ್ಜಿ ನಿಂಗೆ ಮೋದಿಜೀ ಫೋನ್ ಮಾಡಿದ್ದಾರೆ ಎಂದು ಮೊಮ್ಮಗ ಪ್ರಾಂಕ್ ಮಾಡಿದಾಗ ನಂಬಿದ ಅಜ್ಜಿ ಮುಗ್ಧವಾಗಿ ಮಾತನಾಡಿದ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಪ್ರಧಾನಿ ಮೋದಿಯವರನ್ನು ರಾಜಕೀಯಕ್ಕಿಂತ ಮಿಗಿಲಾಗಿ ಆರಾಧಿಸುವ ಎಷ್ಟೋ ಮಂದಿಯಿದ್ದಾರೆ. ಅದರಲ್ಲೂ ತವರು ಗುಜರಾತ್ ನಲ್ಲಂತೂ ಮೋದಿಜೀ ಎಂದರೆ ಭಾರೀ ಗೌರವವಿದೆ. ಅವರನ್ನು ಮನೆ ಮಗನಂತೆ ಪ್ರೀತಿಸುತ್ತಾರೆ.
ಇದೀಗ ನೀಟ್ ಅಕ್ರಮ ವಿಚಾರದಲ್ಲಿ ಪ್ರತಿಭಟನೆಗಳಾದ ಬಳಿಕ ಮೋದಿ ಪ್ರತಿನಿತ್ಯ ಒಂದು ಸೆಲ್ಫೀ ರೀಲ್ಸ್ ಮಾಡಿ ತಮ್ಮ ಸರ್ಕಾರ ಕೈಗೊಂಡಿರುವ ಕ್ರಮಗಳ ಬಗ್ಗೆ ಮಾಹಿತಿ ನೀಡುತ್ತಿದ್ದಾರೆ. ಈ ವಿಡಿಯೋವೊಂದನ್ನು ತೋರಿಸಿ ಮೊಮ್ಮಗ ಅಜ್ಜಿ ನೋಡು ನಿನಗೆ ಮೋದಿಜೀ ಫೋನ್ ಮಾಡಿದ್ದಾರೆ ಎಂದು ಪ್ರಾಂಕ್ ಮಾಡುತ್ತಾರೆ. ಆಗ ಅಜ್ಜಿಯ ಮುಖ ಅರಳುತ್ತದೆ.
ಖುಷಿಯಿಂದಲೇ ಫೋನ್ ತೆಗೆದುಕೊಂಡು ತುಂಬಾ ಮಳೆಯಾಗಿದೆ. ಹಾ ಹೌದು.. ನಾನು ಗುಜರಾತಿ, ಅಹಮ್ಮದಾಬಾದ್ ನವಳು. ಒಂದು ದಿನ ಭೇಟಿಯಾಗೋಣ. ಹಿಂದಿಯಲ್ಲಿ ಮಾತನಾಡುತ್ತಾರೆ ಇವರು. ನನಗೂ ಒಂದು ದಿನ ಪ್ರೈಮ್ ಮಿನಿಸ್ಟರ್ ಆಗಬೇಕು, ಒಂದು ದಿನ ಭೇಟಿಯಾಗೋಣ ಎಂದು ಅಜ್ಜಿ ಮುಗ್ಧವಾಗಿ ಮಾತನಾಡುತ್ತಾಳೆ. ಪಾಪ ಅಜ್ಜಿಗೆ ಅದು ರೀಲ್ಸ್ ಎಂದೆಲ್ಲಾ ಗೊತ್ತಿಲ್ಲ. ನಿಜವಾಗಿಯೂ ಮೋದಿ ಕರೆ ಮಾಡಿದ್ದಾರೆ ಎಂದು ತಿಳಿದುಕೊಂಡು ಮಾತನಾಡುತ್ತಾರೆ. ಈ ವಿಡಿಯೋ ಇಲ್ಲಿದೆ ನೋಡಿ.
About Writer
ಕೃಷ್ಣವೇಣಿ ಕೆ
Completed bachelor degree in Journalism and communication in SDMC Ujire. 15 years of experience as journalist. Worked as sub editor and reporter. Specialties in sports, politics and entertainment.....
ಮತ್ತಷ್ಟು ಓದಿ