Select Your Language

Notifications

webdunia
webdunia
webdunia
webdunia

ಎಷ್ಟೂಂತ ಸಹಿಸೋದು.. ತನಗೆ ಒಂದೇ ಸಮನೆ ಹೊಡೆಯುತ್ತಿದ್ದ ಮಹಿಳೆ ಮೇಲೆ ಈ ವ್ಯಕ್ತಿ ಏನು ಮಾಡಿದ್ರು ನೋಡಿ Video

Viral video airport
Photo Credit: X
ಚೀನಾದ ವಿಮಾನ ನಿಲ್ದಾಣವೊಂದರಲ್ಲಿ ನಡೆದ ಘಟನೆಯ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದೆ. ವಿಮಾನ ನಿಲ್ದಾಣದ ಮಹಿಳಾ ಪ್ರಯಾಣಿಕರೊಬ್ಬರು ಅಲ್ಲಿದ್ದ ಸಿಬ್ಬಂದಿಯೊಬ್ಬರ ಮೇಲೆ ಹಿಂಸಾತ್ಮಕವಾಗಿ ನಿರಂತರವಾಗಿ ಹಲ್ಲೆ ನಡೆಸಿದ್ದು, ಸುತ್ತಲೂ ಇದ್ದ ಜನರು ಮೌನ ಪ್ರೇಕ್ಷಕರಾಗಿ ನೋಡುತ್ತಿದ್ದ ದೃಶ್ಯಗಳು ವಿಡಿಯೋದಲ್ಲಿ ಸೆರೆಯಾಗಿವೆ.

ಕೊನೆಗೆ ಸಹನೆಯ ಗಡಿ ದಾಟಿದಾಗ, ಆ ಸಿಬ್ಬಂದಿ ತಮ್ಮ ಆತ್ಮರಕ್ಷಣೆಗಾಗಿ ತಿರುಗಿ ಪೆಟ್ಟು ನೀಡಬೇಕಾದ ಪರಿಸ್ಥಿತಿ ನಿರ್ಮಾಣವಾಯಿತು.

ವರದಿಗಳ ಪ್ರಕಾರ, ವಿಮಾನ ವಿಳಂಬ ಅಥವಾ ತಾಂತ್ರಿಕ ಕಾರಣಗಳ ಕುರಿತು ಗೊಂದಲ ಏರ್ಪಟ್ಟಾಗ ಕೋಪಗೊಂಡ ಮಹಿಳಾ ಪ್ರಯಾಣಿಕರೊಬ್ಬರು ವಿಮಾನ ನಿಲ್ದಾಣದ ಗ್ರೌಂಡ್ ಸಿಬ್ಬಂದಿಯ ಬಳಿ ತೆರಳಿ ಗಲಾಟೆ ಆರಂಭಿಸಿದ್ದಾರೆ.

ಮಹಿಳೆಯು ಮಾತು ಮುಗಿಸಿ ಕೆನ್ನೆಗೆ ಬಾರಿಸುವುದು, ಕೈಯಲ್ಲಿದ್ದ ವಸ್ತುಗಳಿಂದ ಹೊಡೆಯುವುದು ಮಾಡುತ್ತಿದ್ದರೂ ಆರಂಭದಲ್ಲಿ ಆ ಸಿಬ್ಬಂದಿ ಅತ್ಯಂತ ಶಾಂತವಾಗಿ, ವೃತ್ತಿಪರತೆಯಿಂದ ಪರಿಸ್ಥಿತಿ ತಿಳಿಗೊಳಿಸಲು ಯತ್ನಿಸಿದರು. ಕೌಂಟರ್ ಸುತ್ತಲೂ ನೂರಾರು ಜನರಿದ್ದರೂ, ಯಾರೊಬ್ಬರೂ ಆ ಮಹಿಳೆಯನ್ನು ತಡೆಯಲು ಅಥವಾ ಸಿಬ್ಬಂದಿಯ ನೆರವಿಗೆ ಬರಲು ಮುಂದಾಗಲಿಲ್ಲ.

ದಾಳಿ ನಿರಂತರವಾಗಿ ಮುಂದುವರಿದು ಸಹನೆಯ ಗಡಿ ಮೀರಿದಾಗ ಹಾಗೂ ದೈಹಿಕವಾಗಿ ಗಂಭೀರ ಗಾಯವಾಗುವ ಹಂತಕ್ಕೆ ತಲುಪಿದಾಗ, ಸಿಬ್ಬಂದಿ ತಮ್ಮನ್ನು ರಕ್ಷಿಸಿಕೊಳ್ಳಲು ಮಹಿಳೆಯ ಕೈಯನ್ನು ತಡೆದು ತಿರುಗಿ ಏಟು ನೀಡಿದ್ದಾರೆ.

ಆನ್‌ಲೈನ್‌ನಲ್ಲಿ ಹೆಚ್ಚಿನ ಜನರು ಸಿಬ್ಬಂದಿಯ ಪರವಾಗಿ ಧ್ವನಿ ಎತ್ತಿದ್ದಾರೆ. "ಗಂಡಸಾಗಿರಲಿ ಅಥವಾ ಹೆಂಗಸಾಗಿರಲಿ, ಹಲ್ಲೆ ಎಸಗುವುದು ತಪ್ಪು. ವೃತ್ತಿಪರತೆಗೂ ಒಂದು ಮಿತಿಯಿರುತ್ತದೆ. ಜೀವಕ್ಕೆ ಅಪಾಯ ತಂದೊಡ್ಡುವಾಗ ತಿರುಗಿಬೀಳುವುದು ಆತ್ಮರಕ್ಷಣೆಯ ಹಕ್ಕು" ಎಂದು ಕಾಮೆಂಟ್ ಮಾಡಿದ್ದಾರೆ.


Share this Story:

Follow Webdunia kannada

ಮುಂದಿನ ಸುದ್ದಿ

ಬಿಎಂಟಿಸಿ ಬಸ್ ನಲ್ಲಿ ಯುವತಿಗೆ ಲೈಂಗಿಕ ಕಿರುಕುಳ: ಸರಿಯಾಗೇ ಗೂಸಾ ಕೊಟ್ಟ ಚಾಲಕ video