Publish Date: Mon, 24 Aug 2026 (10:56 IST)
Updated Date: Mon, 24 Aug 2026 (11:02 IST)
ಜಗತ್ತಿನಲ್ಲಿ ಎಂತೆಂಥಾ ಜನರಿರುತ್ತಾರೆ ನೋಡಿ. ಸಾಮಾನ್ಯವಾಗಿ ಜನ ಭೂಮಿ ಮೇಲೆಯೇ ಮನೆ ಮಾಡೋದು. ಆದರೆ ಈ ಒಂದು ಕುಟುಂಬ ಫ್ಲೈ ಓವರ್ ಪಿಲ್ಲರ್ ಮೇಲೆ ಮನೆ ಮಾಡಿಕೊಂಡಿದೆ.
ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುವ ಕೆಲವೊಂದು ವಿಡಿಯೋಗಳು ನಿಜಕ್ಕೂ ಸೋಜಿಗವುಂಟು ಮಾಡುತ್ತದೆ. ಅಂತಹದ್ದೇ ಒಂದು ವಿಡಿಯೋ ಇದಾಗಿದೆ. ಕುಟುಂಬವೊಂದು ಫ್ಲೈ ಓವರ್ ಪಿಲ್ಲರ್ ನ ಮೇಲ್ಭಾಗದಲ್ಲಿ ಪುಟ್ಟ ಜಾಗವಿರುತ್ತದಲ್ಲಾ? ಅಲ್ಲೇ ಮನೆ ಮಾಡಿಕೊಂಡಿದೆ.
ಕೆಳಗಡೆ ಸಾಕಷ್ಟು ವಾಹನಗಳು ಓಡಾಡಿಕೊಂಡಿವೆ. ಫ್ಲೈ ಓವರ್ ಮೇಲೆಯೂ ಸಾಕಷ್ಟು ವಾಹನಗಳು ಓಡಾಡುತ್ತವೆ. ಇದರ ನಡುವೆ ಪಿಲ್ಲರ್ ಮತ್ತು ಸೇತುವೆ ಸೇರುವಲ್ಲಿ ಕಿರಿದಾದ ಜಾಗವಿದೆ. ಅಲ್ಲಿಯೇ ಈ ಕುಟುಂಬ ಮನೆ ಮಾಡಿಕೊಂಡಿದೆ.
ಇಲ್ಲಿ ಓರ್ವ ಮಹಿಳೆ ಬಟ್ಟೆ ಹಾಕುವ ದೃಶ್ಯ ಕಾಣಬಹುದು. ಜೊತೆಗೆ ಮನೆಯ ಮುಂದೆ ಕೂತಿರುವಂತೆ ಒಂದಿಬ್ಬರು ಕೂತಿರುವುದನ್ನು ನೋಡಬಹುದು. ಅಷ್ಟಕ್ಕೂ ಇವರಿಗೆ ಇಲ್ಲಿ ಮನೆ ಮಾಡಲು ಒಪ್ಪಿಗೆ ಕೊಟ್ಟವರು ಯಾರು? ಇವರು ಇಲ್ಲಿಗೆ ಹೇಗೆ ಹೋದರು ಎನ್ನುವುದು ಪ್ರಶ್ನಾರ್ಹವಾಗಿದೆ. ಈ ವಿಡಿಯೋ ಇಲ್ಲಿದೆ ನೋಡಿ.
About Writer
ಕೃಷ್ಣವೇಣಿ ಕೆ
Completed bachelor degree in Journalism and communication in SDMC Ujire. 15 years of experience as journalist. Worked as sub editor and reporter. Specialties in sports, politics and entertainment.....
ಮತ್ತಷ್ಟು ಓದಿ