ಉತ್ತರಾಖಂಡ: ಚಮೋಲಿ ಜಿಲ್ಲೆಯ ಮಾನಾ ಗ್ರಾಮಾದ ಬಳಿ ಭಾರೀ ಹಿಮಪಾತವಾಗಿದ್ದು 57 ಕ್ಕೂ ಹೆಚ್ಚು ಕಾರ್ಮಿಕರು ಸಿಲುಕಿಕೊಂಡಿದ್ದಾರೆ. ಇದೀಗ ಹಿಮಪಾತದ ಭೀಕರ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಹಿಮದಡಿ ಸಿಲುಕಿದ ಬಾರ್ಡರ್ ರೋಡ್ ಆರ್ಗನೈಸೇಷನ್ ನ 47 ಕಾರ್ಮಿಕರ ರಕ್ಷಣೆ ಮಾಡಲಾಗಿದೆ. ಇವರಲ್ಲಿ ಮೂವರ ಸ್ಥಿತಿ ಗಂಭೀರವಾಗಿದೆ. ಭಾರತೀಯ ಯೋಧರು ರಕ್ಷಣಾ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ. ಚೀನಾ ಗಡಿ ಬಳಿಯ ಭಾರತದ ಕಡೆಯ ಗ್ರಾಮದಲ್ಲಿ ಹಿಮಪಾತ ಸಂಭವಿಸಿದೆ.
ಪರ್ವತ ಶ್ರೇಣಿಗಳನ್ನು ಮುತ್ತಿಕೊಂಡಿದ್ದ ಹಿಮ ಪ್ರವಾಹದಂತೆ ಹರಿದುಬರುತ್ತಿರುವ ವಿಡಿಯೋ ಕಾಣಬಹುದು. ಈಗಾಗಲೇ ಭಾರತೀಯ ಸೇನೆ ಹೆಲಿಕಾಪ್ಟರ್ ಮೂಲಕ ಹಿಮದಡಿ ಸಿಲುಕಿದವರನ್ನು ರಕ್ಷಿಸಿ ಆಸ್ಪತ್ರೆಗೆ ಸಾಗಿಸುವ ಕೆಲಸ ಮಾಡುತ್ತಿದೆ.
ಹಿಮದಡಿ ಇನ್ನೂ ಸಿಲುಕಿರುವ ಕಾರ್ಮಿಕರ ರಕ್ಷಣೆಗೆ ಸೇನೆ ಕಾರ್ಯಾಚರಣೆ ನಡೆಸುತ್ತಲೇ ಇದೆ. ಆದರೆ ವಿಪರೀತ ಹಿಮಪಾತದಿಂದಾಗಿ ಸೇನಾ ಕಾರ್ಯಾಚರಣೆಯೂ ಕಠಿಣವಾಗಿದೆ. ಸೇನೆಗೆ ಎಲ್ಲಾ ರೀತಿಯ ನೆರವು ನೀಡುವುದಾಗಿ ಪ್ರಧಾನಿ ಮೋದಿ ಭರವಸೆ ನೀಡಿದ್ದಾರೆ.