Select Your Language

Notifications

webdunia
webdunia
webdunia
webdunia

ಯುಪಿಎಸ್‌ಸಿ ಫಲಿತಾಂಶ ಪ್ರಕಟ: 1009 ಮಂದಿ ನೇಮಕಾತಿ, ಟಾಪರ್‌ ಶಕ್ತಿ ದುಬೆ ಓದಿದ್ದೇನು ಗೊತ್ತಾ

Union Public Service Commission, Civil Services Examination, UPSC topper Shakti Dubey

Sampriya

ನವದೆಹಲಿ , ಮಂಗಳವಾರ, 22 ಏಪ್ರಿಲ್ 2025 (15:49 IST)
Photo Courtesy X
ನವದೆಹಲಿ: ಕೇಂದ್ರ ಲೋಕಸೇವಾ ಆಯೋಗಯು ನಾಗರಿಕ ಸೇವಾ ಪರೀಕ್ಷೆ  2025 ರ ಅಂತಿಮ ಫಲಿತಾಂಶವನ್ನು ಇಂದು ಘೋಷಿಸಿದೆ. ವಾರಣಾಸಿಯ ಶಕ್ತಿ ದುಬೆ ಅಗ್ರಸ್ಥಾನ ಗಳಿಸಿದ್ದಾರೆ, ಹರಿಯಾಣದ ಹರ್ಷಿತಾ ಗೋಯಲ್ ಎರಡನೇ ಸ್ಥಾನ ಮತ್ತು ಡೊಂಗ್ರೆ ಅರ್ಚಿತ್ ಪರಾಗ್ ಮೂರನೇ ಸ್ಥಾನ ಗಳಿಸಿದ್ದಾರೆ.

ಐಎಎಸ್, ಐಪಿಎಸ್, ಐಎಫ್‌ಎಸ್ ಮತ್ತು ಕೇಂದ್ರ ಸೇವೆಗಳ ಗ್ರೂಪ್ ಎ ಮತ್ತು ಬಿ ನಂತಹ ಸೇವೆಗಳಲ್ಲಿ ನೇಮಕಾತಿಗಾಗಿ ಯುಪಿಎಸ್‌ಸಿ 1009 ಅಭ್ಯರ್ಥಿಗಳನ್ನು ಶಿಫಾರಸು ಮಾಡಿದೆ. ಇವರಲ್ಲಿ 725 ಪುರುಷರು ಹಾಗೂ 284 ಮಹಿಳೆಯರು ಸೇರಿದ್ದಾರೆ.

ಅಲಹಾಬಾದ್ ವಿಶ್ವವಿದ್ಯಾಲಯದಿಂದ ಜೀವರಸಾಯನ ವಿಜ್ಞಾನದಲ್ಲಿ ಪದವಿ ಪಡೆದಿರುವ ದುಬೆ, ಲೋಕಸೇವಾ ಆಯೋಗದ ಪರೀಕ್ಷೆಗೆ ರಾಜಕೀಯ ವಿಜ್ಞಾನ ಮತ್ತು ಅಂತರರಾಷ್ಟ್ರೀಯ ವ್ಯವಹಾರ ವಿಷಯಗಳನ್ನು ಆಯ್ಕೆ ಮಾಡಿಕೊಂಡಿದ್ದರು.

ಬರೋಡಾದ ಎಂಎಸ್ ವಿಶ್ವವಿದ್ಯಾಲಯದಿಂದ ಬಿ.ಕಾಂ. ಪದವಿ ಪಡೆದಿರುವ ಹರ್ಷಿತಾ ಗೋಯಲ್ ಅವರು ರಾಜಕೀಯ ವಿಜ್ಞಾನ ಮತ್ತು ಅಂತರರಾಷ್ಟ್ರೀಯ ವ್ಯವಹಾರ ವಿಷಯಗಳನ್ನು ಆಯ್ಕೆ ಮಾಡಿಕೊಂಡಿದ್ದರು. ವೆಲ್ಲೋರ್‌ನ ವಿಐಟಿ ಕಾಲೇಜಿನಿಂದ ಎಲೆಕ್ಟ್ರಿಕಲ್ ಮತ್ತು ಎಲೆಕ್ಟ್ರಾನಿಕ್ಸ್ ವಿಷಯದಲ್ಲಿ ಬಿ.ಟೆಕ್. ಎಂಜಿನಿಯರಿಂಗ್ ಪದವಿ ಪಡೆದಿರುವ ಡೊಂಗ್ರೆ ಅರ್ಚಿತ್ ಪರಾ ತತ್ವಶಾಸ್ತ್ರವನ್ನು ಮುಖ್ಯ ಪರೀಕ್ಷೆಗೆ ಆಯ್ಕೆ ಮಾಡಿಕೊಂಡಿದ್ದರು.

ಮೊದಲು ಐದು ರ‍್ಯಾಂಕ್‌ಗಳಲ್ಲಿ ಮೂವರು ಮಹಿಳೆಯರು ಹಾಗೂ ಇಬ್ಬರು ಪುರುಷರು ಇದ್ದಾರೆ.  2024ರ ಕೇಂದ್ರ ಲೋಕಸೇವಾ ಆಯೋಗದ ಪೂರ್ವಭಾವಿ ಪರೀಕ್ಷೆಯು ಜೂನ್ 16ರಂದು ನಡೆದಿತ್ತು. 9,92,599 ಅಭ್ಯರ್ಥಿಗಳು ಅರ್ಜಿ ಸಲ್ಲಿಸಿದ್ದರು. ಇವರಲ್ಲಿ 5,83,213 ಅಭ್ಯರ್ಥಿಗಳು ಮಾತ್ರ ಪರೀಕ್ಷೆ ಬರೆದಿದ್ದರು.

ಮುಖ್ಯ ಪರೀಕ್ಷೆಗೆ 14,627 ಅಭ್ಯರ್ಥಿಗಳು ಆಯ್ಕೆಯಾಗಿದ್ದರು. ಕಳೆದ ಸೆಪ್ಟೆಂಬರ್‌ನಲ್ಲಿ ಮುಖ್ಯ ಪರೀಕ್ಷೆ ನಡೆದಿತ್ತು. ಇವರಲ್ಲಿ 2,845 ಅಭ್ಯರ್ಥಿಗಳು ಸಂದರ್ಶನ ಹಂತಕ್ಕೆ ಆಯ್ಕೆಯಾಗಿದ್ದರು. ಐಎಎಸ್, ಐಎಫ್‌ಎಸ್, ಐಪಿಎಸ್ ಸೇರಿದಂತೆ ಕೇಂದ್ರ ಲೋಕಸೇವಾ ಆಯೋಗ ನಡೆಸುವ ಕೇಂದ್ರ ನಾಗರಿಕ ಸೇವಾ ಪರೀಕ್ಷೆಯ ವಿವಿಧ ಹುದ್ದೆಗಳಿಗೆ ಅಂತಿಮವಾಗಿ 1,009 ಅಭ್ಯರ್ಥಿಗಳು ಆಯ್ಕೆಯಾಗಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಶರಬತ್‌ ಜಿಹಾದ್‌ ಹೇಳಿಕೆಗೆ ಸ್ವೀಕಾರರ್ಹವಲ್ಲ: ಬಾಬಾ ರಾಮ್‌ದೇವ್‌ ವಿರುದ್ಧ ಡೆಲ್ಲಿ ಹೈಕೋರ್ಟ್‌ ಗರಂ