Publish Date: Fri, 20 Dec 2019 (09:17 IST)
Updated Date: Fri, 20 Dec 2019 (09:18 IST)
ನವದೆಹಲಿ: 2017 ರಲ್ಲಿ ಉನ್ನಾವೋದಲ್ಲಿ ಮಹಿಳೆಯ ಮೇಲೆ ಅತ್ಯಾಚಾರ ಮಾಡಿದ ಆರೋಪದಲ್ಲಿ ಬಂಧಿತರಾಗಿರುವ ಬಿಜೆಪಿಯ ಮಾಜಿ ಶಾಸಕ ಕುಲದೀಪ್ ಸಿಂಗ್ ಸೆನಗರ್ ಗೆ ಶಿಕ್ಷೆಯ ಪ್ರಮಾಣ ಇಂದು ಪ್ರಕಟವಾಗಲಿದೆ.
ವಿಚಾರಣೆ ಪೂರ್ತಿಗೊಳಿಸಿರುವ ದೆಹಲಿ ಕೋರ್ಟ್ ಇಂದು ಶಿಕ್ಷೆಯ ಪ್ರಮಾಣ ಪ್ರಕಟಿಸಲಿದೆ. ವಿಚಾರಣೆ ನಡೆಸಿರುವ ಸಿಬಿಐ ಮಾಜಿ ಶಾಸಕನಿಗೆ ಜೀವಾವಧಿ ಶಿಕ್ಷೆ ನೀಡಬೇಕು ಎಂದು ಆಗ್ರಹಿಸಿದೆ.
ಇನ್ನು, ಕುಲದೀಪ್ ಪರ ವಾದಿಸಿರುವ ವಕೀಲರು ಶಿಕ್ಷೆಯ ಪ್ರಮಾಣವನ್ನು ಕನಿಷ್ಠ 10 ವರ್ಷಕ್ಕೆ ಇಳಿಕೆ ಮಾಡಬೇಕೆಂದು ಮನವಿ ಮಾಡಿದ್ದಾರೆ. ಒಂದು ವೇಳೆ ಇಂದು ಕೋರ್ಟ್ ಪ್ರಭಾವಿ ನಾಯಕನಿಗೆ ತಕ್ಕ ಶಿಕ್ಷೆ ಪ್ರಮಾಣ ಪ್ರಕಟಿಸಿದರೆ ಅದು ಇಂತಹ ಕೃತ್ಯವೆಸಗುವ ದುರುಳರಿಗೆ ನೀಡುವ ಖಡಕ್ ಸಂದೇಶವಾಗಲಿದೆ.