Select Your Language

Notifications

webdunia
webdunia
webdunia
webdunia

ದೆಹಲಿ ಕೋರ್ಟ್ ಎದುರು ಹಾಜರಾಗಲಿರುವ ನಿರ್ಭಯಾ ಅಪರಾಧಿಗಳು

ದೆಹಲಿ ಕೋರ್ಟ್ ಎದುರು ಹಾಜರಾಗಲಿರುವ ನಿರ್ಭಯಾ ಅಪರಾಧಿಗಳು
ನವದೆಹಲಿ , ಶುಕ್ರವಾರ, 13 ಡಿಸೆಂಬರ್ 2019 (08:45 IST)
ನವದೆಹಲಿ: ಗಲ್ಲು ಶಿಕ್ಷೆ ಎದುರಿಸುತ್ತಿರುವ ನಿರ್ಭಯಾ ಗ್ಯಾಂಗ್ ರೇಪ್ ಅಪರಾಧಿಗಳು ಇಂದು ದೆಹಲಿ ಕೋರ್ಟ್ ಎದುರು ವಿಡಿಯೋ ಕಾನ್ಫರೆನ್ಸ್ ಮೂಲಕ ವಿಚಾರಣೆಗೆ ಹಾಜರಾಗಲಿದ್ದಾರೆ.


ಭದ್ರತೆಯ ಕಾರಣಕ್ಕಾಗಿ ಅಪರಾಧಿಗಳನ್ನು ವಿಡಿಯೋ ಕಾನ್ಫರೆನ್ಸ್ ಮೂಲಕ ಪಟಿಯಾಲ ಕೋರ್ಟ್ ವಿಚಾರಣೆ ನಡೆಸಲಿದೆ. ಇವರ ಕ್ಷಮಾದಾನ ಕುರಿತಂತೆ ವಿಚಾರಣೆ ನಡೆಯಲಿದೆ.

ಇಂದು ನಡೆಯುವ ವಿಚಾರಣೆಯ ಬಳಿಕ ಈ ಅಪರಾಧಿಗಳ ಗಲ್ಲು ಶಿಕ್ಷೆ ಶೀಘ್ರ ಜಾರಿ ಮಾಡುವುದರ ಬಗ್ಗೆ ತೀರ್ಮಾನವಾಗಲಿದೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ನಿರ್ಭಯಾ ತಾಯಿ ತಕ್ಷಣವೇ ಈ ಅಪರಾಧಿಗಳಿಗೆ ಗಲ್ಲು ಶಿಕ್ಷೆ ಜಾರಿ ಮಾಡಲು ಕೋರ್ಟ್ ಆದೇಶಿಸಬಹುದು ಭರವಸೆ ವ್ಯಕ್ತಪಡಿಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ರಾಜಕೀಯದಲ್ಲೂ ಮಾನವೀಯತೆ ಮೆರೆದ ಬಿಜೆಪಿ ನಾಯಕರು