Publish Date: Sat, 14 Dec 2019 (09:30 IST)
Updated Date: Sat, 14 Dec 2019 (09:31 IST)
ನವದೆಹಲಿ: 2012 ರಲ್ಲಿ ದೆಹಲಿ ಗ್ಯಾಂಗ್ ರೇಪ್ ಪ್ರಕರಣದಲ್ಲಿ ಅಪರಾಧಿಗಳಾಗಿ ಗಲ್ಲು ಶಿಕ್ಷೆ ಎದುರಿಸುತ್ತಿರುವ ನಾಲ್ವರು ಆರೋಪಿಗಳು ಖಿನ್ನತೆಗೊಳಗಾಗಿದ್ದಾರೆ ಎನ್ನಲಾಗಿದೆ.
ಗಲ್ಲು ಶಿಕ್ಷೆ ಹತ್ತಿರ ಬರುತ್ತಿದ್ದಂತೇ ಮಾನಸಿಕವಾಗಿ ಖಿನ್ನತೆಗೊಳಗಾಗಿರುವ ಅಪರಾಧಿಗಳ ಮೇಲೆ ಸಿಸಿಟಿವಿ ಮೂಲಕ ಜೈಲು ಅಧಿಕಾರಿಗಳು ತೀವ್ರ ನಿಗಾ ವಹಿಸಿದ್ದಾರೆ. ಖಿನ್ನತೆಯಿಂದಾಗಿ ಇವರು ಆತ್ಮಹತ್ಯೆ ಮಾಡಿಕೊಳ್ಳುವ ಅಪಾಯವಿರುವುದರಿಂದ ಈ ಕ್ರಮ ಕೈಗೊಳ್ಳಲಾಗಿದೆ.
ಇನ್ನೊಂದೆಡೆ, ಇವರ ಗಲ್ಲು ಶಿಕ್ಷೆಯ ಕುರಿತಾಗಿ ದೆಹಲಿ ನ್ಯಾಯಾಲಯ ವಿಚಾರಣೆಯನ್ನು ಡಿಸೆಂಬರರ್ 18 ಕ್ಕೆ ಮುಂದೂಡಿದೆ. ಹೀಗಾಗಿ ಮತ್ತಷ್ಟು ದಿನ ಶಿಕ್ಷೆ ಜಾರಿಯಾಗುವುದು ತಡವಾಗಲಿದೆ ಎನ್ನಲಾಗಿದೆ.