Select Your Language

Notifications

webdunia
webdunia
webdunia
webdunia

ರಾಹುಲ್ ಗಾಂಧಿ ‘ರೇಪ್ ಇನ್ ಇಂಡಿಯಾ’ ಹೇಳಿಕೆಗೆ ತಿರುಗೇಟು ನೀಡಿದ ಸಚಿವೆ ಸ್ಮೃತಿ ಇರಾನಿ

ರಾಹುಲ್ ಗಾಂಧಿ ‘ರೇಪ್ ಇನ್ ಇಂಡಿಯಾ’ ಹೇಳಿಕೆಗೆ ತಿರುಗೇಟು ನೀಡಿದ ಸಚಿವೆ ಸ್ಮೃತಿ ಇರಾನಿ
ನವದೆಹಲಿ , ಶನಿವಾರ, 14 ಡಿಸೆಂಬರ್ 2019 (07:19 IST)
ನವದೆಹಲಿ : ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರ ‘ರೇಪ್ ಇನ್ ಇಂಡಿಯಾ’ ಎಂಬ ಹೇಳಿಕೆಗೆ ಕೇಂದ್ರ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಸ್ಮೃತಿ ಇರಾನಿ ಅವರು ಹಾಗಾದ್ರೆ ಭಾರತದಲ್ಲಿರುವ ಪ್ರತಿಯೊಬ್ಬ ಪುರುಷ ಅತ್ಯಾಚಾರಿಯೇ? ಎಂದು ಪ್ರಶ್ನಿಸುವುದರ ಮೂಲಕ ತಿರುಗೇಟು ನೀಡಿದ್ದಾರೆ.



ಈ ಕುರಿತು ಮಾತನಾಡಿದ ಅವರು, ಕಾಂಗ್ರೆಸ್ ನಾಯಕರು  ರೇಪ್ ಇನ್ ಇಂಡಿಯಾ ಎಂದು ಯಾವಾಗ ಹೇಳಿದರೋ ಅಂದೇ ದೇಶದ ಎಲ್ಲ ಪುರುಷರು ಅತ್ಯಾಚಾರಿಗಳು ಎಂದು ತಿಳಿಯಿತು. ಕಾಂಗ್ರೆಸ್ ಸಂಸದರು ಭಾರತದ ಮೇಲೆ ಅತ್ಯಾಚಾರ ಎಸಗಲು ಪುರುಷರನ್ನು ಯಾವಾಗ ಕರೆಸಿದರು ಎಂಬುದೇ ಆಶ್ಚರ್ಯಕರ ಸಂಗತಿಯಾಗಿದೆ ಎಂದು ವಾಗ್ದಾಳಿ ನಡೆಸಿದ್ದಾರೆ.


ಅಲ್ಲದೇ ಈ ಹೇಳಿಕೆಯ ಮೂಲಕ ರಾಹುಲ್ ಗಾಂಧಿ ಮಹಿಳೆಯರ ಮೇಲೆ ಅತ್ಯಾಚಾರ ಎಸಗಲು ದೇಶದ ಜನತೆಗೆ ಕರೆ ನೀಡಿದ್ದಾರೆ. ಇವರನ್ನು ಶಿಕ್ಷಿಸಬೇಕು. ಇವರು ಮಹಿಳೆಯರಿಗೆ  ಹಾಗೂ ಜನತೆಗೆ ಅವಮಾನ ಮಾಡಿದ್ದಾರೆ. ಹೀಗಾಗಿ ಅವರು ಕ್ಷಮೆಯಾಚಿಸಬೇಕು ಎಂದು ಆಗ್ರಹಿಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ತಂದೆ ಅನೈತಿಕ ಸಂಬಂಧಕ್ಕೆ ಅಡ್ಡಿಪಡಿಸಿದ್ದಕ್ಕೆ ಬಲಿಯಾಯ್ತ ಆತನ ಮಗಳ ಪ್ರಾಣ?