ನನ್ನ ಮನೆಯಲ್ಲಿ ನನ್ನ ಕೈಯಿಂದಲೇ ದಲಿತರಿಗೆ ಬಡಿಸಿದರೆ ನನ್ನ ಮನೆ ಪಾವನವಾಗುತ್ತದೆ - ಕೇಂದ್ರ ಸಚಿವೆ ಉಮಾ ಭಾರತಿ

Webdunia
ಗುರುವಾರ, 3 ಮೇ 2018 (06:39 IST)
ಚತ್ತಾರ್ ಪರ : ನೌಗಾಂವ್‌ನ ಗಧಮಾವು ಗ್ರಾಮದಲ್ಲಿ ಆಯೋಜಿಸಲಾಗಿದ್ದ ಸಾಮೂಹಿಕ ಭೋಜನ ಕೂಟದಲ್ಲಿ ಆಹಾರ ಸೇವಿಸಲು ನಿರಾಕರಿಸಿರುವ ಕೇಂದ್ರ ಸಚಿವೆ ಉಮಾ ಭಾರತಿ ಅವರು ದಲಿತರನ್ನು ಪವಿತ್ರಗೊಳಿಸಲು ತಾನು ಶ್ರೀರಾಮನಲ್ಲ ಎಂದು ಹೇಳಿದ್ದಾರೆ.


'ನಾನು ನನ್ನನ್ನು ರಾಮ ಎಂದು ಪರಿಗಣಿಸುವುದಿಲ್ಲ. ಆದುದರಿಂದ ದಲಿತರ ಮನೆಯಲ್ಲಿ ಆಹಾರ ಸೇವಿಸಿ ಅವರನ್ನು ಪವಿತ್ರಗೊಳಿಸಲು ಸಾಧ್ಯವಿಲ್ಲ. ಅದರ ಬದಲು ದಲಿತರನ್ನು ನನ್ನ ನಿವಾಸಕ್ಕೆ ಆಹ್ವಾನಿಸುತ್ತೇನೆ ಹಾಗೂ ಅವರಿಗೆ ವೈಯುಕ್ತಿಕವಾಗಿ ಊಟ ಹಾಕುತ್ತೇನೆ. ದಲಿತರು ನಮ್ಮ ಮನೆಗೆ ಆಗಮಿಸಿ ಹಾಗೂ ನಮ್ಮೊಂದಿಗೆ ಆಹಾರ ಸೇವಿಸಿದರೆ, ಆಗ ನಾವು ಪವಿತ್ರರಾಗುತ್ತೇವೆ. ನನ್ನ ಮನೆಯಲ್ಲಿ ನನ್ನ ಕೈಯಿಂದಲೇ ದಲಿತರಿಗೆ ಬಡಿಸಿದರೆ ನನ್ನ ಮನೆ ಪಾವನವಾಗುತ್ತದೆ’ಎಂದು ಅವರು ಹೇಳಿದ್ದಾರೆ. ದಲಿತರೊಂದಿಗಿನ ಪಕ್ಷ ಉತ್ತಮ ಸಂಬಂಧ ಹೊಂದಿದೆ ಎಂಬುದಕ್ಕೆ ರಾಮನಾಥ್ ಕೋವಿಂದ್ ಅವರನ್ನು ರಾಷ್ಟ್ರಪತಿಯಾಗಿ ನೇಮಕ ಮಾಡಿರುವುದೇ ಉತ್ತಮ ಉದಾಹರಣೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಹೇಳಿದ ಒಂದು ಗಂಟೆಯ ನಂತರ ಉಮಾ ಭಾರತಿ ಅವರ ಈ ಹೇಳಿಕೆ   ಬಿಜೆಪಿಗೆ  ತೀವ್ರ ಮುಜುಗರ ಉಂಟುಮಾಡಿದೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

Gold Price: ಇಂದಿನ ಚಿನ್ನ,ಬೆಳ್ಳಿ ದರ ವಿವರ ಇಲ್ಲಿದೆ

Arecanut Price: ಇಂದು ಅಡಿಕೆ ರೇಟ್ ಎಷ್ಟು ನೋಡಿ

ಮೋದಿ ವಿದೇಶಕ್ಕೆ ಹೋಗಲ್ವಾ, ರಾಹುಲ್ ಹೋದ್ರೆ ತಪ್ಪೇನು ಎಂದ ಮಲ್ಲಿಕಾರ್ಜುನ ಖರ್ಗೆ: ಯಾಕೆ ಹೋಗ್ತಾರೆ ಎಂದ ನೆಟ್ಟಿಗರು

ಜಾತಿ ಸರ್ಟಿಫಿಕೇಟ್ ಪಡೆಯುವುದು ಹೇಗೆ, ಯಾವ ದಾಖಲೆಗಳು ಬೇಕು ಇಲ್ಲಿದೆ ಮಾಹಿತಿ

ಡಿಕೆ ಶಿವಕುಮಾರ್, ರಾಹುಲ್ ಗಾಂಧಿ, ಸೋನಿಯಾ ಗಾಂಧಿ ರಹಸ್ಯ ಮೀಟಿಂಗ್: ನಡೆದಿದ್ದೇನು

ಮುಂದಿನ ಸುದ್ದಿ
Show comments