Select Your Language

Notifications

webdunia
webdunia
webdunia
webdunia

ಪ್ರಧಾನಿ ಮೋದಿಗೆ 10 ಗಂಟೆಗೆ ಭಾಷಣ ಮಾಡಬೇಡಿ ಎಂದ ಟ್ವಿಟರಿಗ! ಕಾರಣವೇನು ಗೊತ್ತಾ?

ಪ್ರಧಾನಿ ಮೋದಿಗೆ 10 ಗಂಟೆಗೆ ಭಾಷಣ ಮಾಡಬೇಡಿ ಎಂದ ಟ್ವಿಟರಿಗ! ಕಾರಣವೇನು ಗೊತ್ತಾ?
ನವದೆಹಲಿ , ಮಂಗಳವಾರ, 14 ಏಪ್ರಿಲ್ 2020 (09:30 IST)
ನವದೆಹಲಿ: ಮೊದಲನೇ ಹಂತದ ಲಾಕ್ ಡೌನ್ ಮುಕ್ತಾಯವಾದ ಹಿನ್ನಲೆಯಲ್ಲಿ ಪ್ರಧಾನಿ ಮೋದಿ ಇಂದು 10 ಗಂಟೆಗೆ ದೇಶವನ್ನುದ್ದೇಶಿಸಿ ಭಾಷಣ ಮಾಡಲಿದ್ದಾರೆ. ಆದರೆ ಟ್ವಿಟರಿಗರೊಬ್ಬರು ಪ್ರಧಾನಿ ಮೋದಿಗೆ 10 ಗಂಟೆಗೆ ಭಾಷಣ ಮಾಡಬೇಡಿ ಎಂದು ಮನವಿ ಮಾಡಿದ್ದಾರೆ!


ಇದಕ್ಕೆ ಕಾರಣವೇನು ಗೊತ್ತಾ? ದೂರದರ್ಶನ ವಾಹಿನಿಯಲ್ಲಿ ಪ್ರಸಾರವಾಗುವ ಜನಪ್ರಿಯ ಪೌರಾಣಿಕ ಧಾರವಾಹಿ ‘ರಾಮಾಯಣ’! ಬೆಳಿಗ್ಗೆ 9 ಗಂಟೆಯಿಂದ ಪ್ರಸಾರವಾಗುವ ಈ ಧಾರವಾಹಿ 10.15 ರವರೆಗೂ ಮುಂದುವರಿಯುತ್ತದೆ. ಹೀಗಾಗಿ ಟ್ವಿಟರಿಗರೊಬ್ಬರು 10.30 ಕ್ಕೆ ಭಾಷಣ ಮಾಡಿ ಎಂದು ಮನವಿ ಮಾಡಿದ್ದಾರೆ.

ನಮಗೆ ರಾಮಾಯಣ ಮತ್ತು ನಿಮ್ಮ ಭಾಷಣ ಎರಡೂ ಮುಖ್ಯವೇ. ನೀವು 10 ಗಂಟೆಗೆ ಭಾಷಣ ಮಾಡಿದರೆ ರಾಮಾಯಣ ಧಾರವಾಹಿ ಮಿಸ್ ಆಗುತ್ತದೆ. ಹೀಗಾಗಿ ಕೊಂಚ ತಡವಾಗಿ ಅಂದರೆ 10.30 ಕ್ಕೆ ಭಾಷಣ ಮಾಡಿದ್ದರೆ ಚೆನ್ನಾಗಿತ್ತು ಎಂದು ಪ್ರಧಾನಿಗೇ ಸಲಹೆ ನೀಡಿದ್ದಾರೆ!

Share this Story:

Follow Webdunia kannada

ಮುಂದಿನ ಸುದ್ದಿ

ಇಂದು ಬೆಳಿಗ್ಗೆ 10 ಗಂಟೆಗೆ ದೇಶದ ಜನರನ್ನುದ್ದೇಶಿಸಿ ಪ್ರಧಾನಿ ಮೋದಿ ಭಾಷಣ