Select Your Language

Notifications

webdunia
webdunia
webdunia
webdunia

ಪಾಕ್‌ಗೆ ಸಹಾಯ ಮಾಡಿದ ಟರ್ಕಿ: ಟರ್ಕಿ ಆ್ಯಪಲ್ ಬ್ಯಾನ್ ಮಾಡಲು ಭಾರತದಲ್ಲಿ ಹೆಚ್ಚಿದ ಒತ್ತಾಯ

ಟರ್ಕಿ ಆಪಲ್. ಪಹಲ್ಗಾಮ್ ದಾಳಿ

Sampriya

ಶಿಮ್ಲಾ , ಗುರುವಾರ, 15 ಮೇ 2025 (18:53 IST)
Photo Credit X
ಶಿಮ್ಲಾ (ಹಿಮಾಚಲ ಪ್ರದೇಶ): ಭಾರತದ ಮೇಲಿನ ದಾಳಿಗೆ ಪಾಕ್‌ಗೆ ಟರ್ಕಿ ಮುಕ್ತವಾಗಿ ಬೆಂಬಲ ಸೂಚಿಸಿದ ಬೆನ್ನಲ್ಲೇ ಹಿಮಾಚಲ ಪ್ರದೇಶದ ಯುವ ಸೇಬು ಬೆಳೆಗಾರರು ಟರ್ಕಿ, ಇರಾನ್, ಇರಾಕ್ ಮತ್ತು ಚೀನಾದಿಂದ ಸೇಬುಗಳ ಆಮದನ್ನು ತಕ್ಷಣವೇ ನಿಷೇಧಿಸಬೇಕೆಂದು ಒತ್ತಾಯಿಸುತ್ತಿದ್ದಾರೆ.

ಎಎನ್‌ಐ ಜತೆ ಮಾತನಾಡಿದ ಶಿಮ್ಲಾ ಜಿಲ್ಲೆಯ ಜುಬ್ಬಲ್‌ನ ಯುವ ಸೇಬು ಬೆಳೆಗಾರ ಅಂಕಿತ್ ಬ್ರಮ್ತಾ ಅವರು, ಟರ್ಕಿಯ ಸೇಬುಗಳನ್ನು ಭಾರತಕ್ಕೆ ಪ್ರವೇಶಿಸುವುದನ್ನು ತಡೆಯಲು ಇದು ಸರಿಯಾದ ಕ್ಷಣವಾಗಿದೆ.

ಭಾರತ-ಪಾಕಿಸ್ತಾನದ ಉದ್ವಿಗ್ನತೆಯ ಸಂದರ್ಭದಲ್ಲಿ ಪಾಕಿಸ್ತಾನಕ್ಕೆ ಟರ್ಕಿಯ ಬೆಂಬಲ ಸೂಚಿಸಿದ ಬಳಿಕ ಟರ್ಕಿ ವಿರುದ್ಧ ಭಾರೀ ಆಕ್ರೋಶ ವ್ಯಕ್ತವಾಗುತ್ತಿದೆ.  ಹಿಮಾಚಲ ಪ್ರದೇಶದ ಶಿಮ್ಲಾದ ಸೇಬು ರೈತರು ಟರ್ಕಿಯ ಸೇಬುಗಳ ಆಮದನ್ನು ತಕ್ಷಣವೇ ನಿಷೇಧಿಸಬೇಕೆಂದು ಒತ್ತಾಯಿಸಿದರು.

ಇತ್ತೀಚಿನ ಉದ್ವಿಗ್ನತೆಗಳಲ್ಲಿ ಟರ್ಕಿ ಪಾಕಿಸ್ತಾನದೊಂದಿಗೆ ನಿಂತಿದೆ. ಚೀನಾ ಮತ್ತು ಇರಾನ್‌ನಂತಹ ಹೆಚ್ಚಿನ ದೇಶಗಳು ನಾವು ಸೇಬುಗಳನ್ನು ಆಮದು ಮಾಡಿಕೊಳ್ಳುತ್ತೇವೆ. ಹಿಮಾಚಲ, ಕಾಶ್ಮೀರ ಮತ್ತು ಉತ್ತರಾಖಂಡಗಳು ಸೇಬುಗಳನ್ನು ಚೆನ್ನಾಗಿ ಉತ್ಪಾದಿಸುತ್ತವೆ. ನಾವು ಟರ್ಕಿಯ ಸೇಬನ್ನು ಆಮದು ಮಾಡಿಕೊಳ್ಳಬಾರದು ಎಂದು ಶಿಮ್ಲಾ ಮೂಲದ ಸೇಬು ಬೆಳೆಗಾರ ಅಮನ್ ಡೋಗ್ರಾ ಸುದ್ದಿ ಸಂಸ್ಥೆ ANI ಗೆ ತಿಳಿಸಿದ್ದಾರೆ.

ನಾವು ಆಮದು ಮಾಡಿಕೊಂಡರೂ ಸಹ, ಸುಂಕಗಳು ಹೆಚ್ಚಿರಬೇಕು, ಏಕೆಂದರೆ ಭಾರತೀಯ ಕುಟುಂಬಗಳು ಸೇಬು ಉತ್ಪಾದನೆಯ ಮೇಲೆ ಮಾತ್ರ ಅವಲಂಬಿತವಾಗಿದೆ ಎಂದರು.

Share this Story:

Follow Webdunia kannada

ಮುಂದಿನ ಸುದ್ದಿ

Tiranga Yatra, ಭಾರತೀಯ ಯೋಧರಿಗೆ ಸ್ಥೈರ್ಯ ತುಂಬಲು ತಿರಂಗಾ ಯಾತ್ರೆ: ಬಿವೈ ವಿಜಯೇಂದ್ರ