Select Your Language

Notifications

webdunia
webdunia
webdunia
webdunia

ಸ್ಟಾರ್ ನಟಿಗೂ ಕಮ್ಮಿ ಇಲ್ಲದಂತೆ ಬದುಕುವ ಟ್ರಾವೆಲ್ ಇನ್‌ಫ್ಲುಯೆನ್ಸರ್ ಶರಣ್ಯ ವರ್ಷದ ಖರ್ಚು ಕೇಳಿದ್ರೆ ದಂಗಾಗ್ತೀರಾ

Travel content creator Sharanya Iye

Sampriya

ಮುಂಬೈ , ಮಂಗಳವಾರ, 7 ಜನವರಿ 2025 (16:30 IST)
Photo Courtesy X
ಟ್ರಾವೆಲ್ ಕಂಟೆಂಟ್ ಕ್ರಿಯೇಟರ್ ಶರಣ್ಯ ಅಯ್ಯರ್ ಅವರು ಕೇವಲ ಒಂದು ವರ್ಷದಲ್ಲಿ ಟ್ರಾವೆಲ್ ಮಾಡುವ ಸಲುವಾಗಿ ಬರೋಬ್ಬರಿ $50ಲಕ್ಷ ಖರ್ಚು ಮಾಡಿರುವುದಾಗಿ ಹೇಳಿರುವುದು ಇದೀಗ ಚರ್ಚೆಗೆ ಕಾರಣವಾಗಿದೆ.

ತನ್ನ ಟ್ರಾವೆಲ್ ವ್ಲಾಗ್‌ಗಳಿಗೆ ಹೆಸರುವಾಸಿಯಾಗಿರುವ ಶರಣ್ಯ ಅಯ್ಯರ್ ಅವರು ತಮ್ಮ ಇತ್ತೀಚಿನ ಇನ್‌ಸ್ಟಾಗ್ರಾಂ ಪೋಸ್ಟ್‌ನಲ್ಲಿ 2024ರಲ್ಲಿ ತನ್ನ ಖರ್ಚಿನ ಬಗ್ಗೆ ಹಂಚಿಕೊಂಡಿದ್ದಾಳೆ. ಅಚ್ಚರಿ ಏನೆಂದರೆ ಆ ಪೋಸ್ಟ್‌ 1.4 ಮಿಲಿಯನ್ ವೀಕ್ಷಣೆಗಳನ್ನು ಗಳಿಸಿದೆ ಮತ್ತು ಅವಳ ಅನುಯಾಯಿಗಳಿಂದ ವ್ಯಾಪಕವಾದ ಪ್ರತಿಕ್ರಿಯೆಗಳನ್ನು ಹುಟ್ಟುಹಾಕಿದೆ.

2024ರಲ್ಲಿ ಆರಕ್ಕೂ ಹೆಚ್ಚು ದೇಶಗಳಿಗೆ ಭೇಟಿ ನೀಡಿದ್ದು, ಕೇವಲ ವಿಮಾನದ ವೆಚ್ಚ ₹5 ಲಕ್ಷ ಎಂದು ಶರಣ್ಯ ತಮ್ಮ ಪೋಸ್ಟ್‌ನಲ್ಲಿ ವಿವರಿಸಿದ್ದಾರೆ. ಇನ್ನೂ ಖರ್ಚಿನ ಸಿಂಹಪಾಲು ₹22 ಲಕ್ಷ ಮೌಲ್ಯದ ಹೊಸ ಕಾರು ಖರೀದಿಗೆ ಆಗಿದೆ. ಉಳಿದ ಖರ್ಚು ಪ್ರಯಾಣ, ವೈದ್ಯಕೀಯ ವೆಚ್ಚಗಳು ಮತ್ತು ಇತರ ವಿರಾಮ ಚಟುವಟಿಕೆಗಳಿಗೆ ಆಗಿದೆ ಎಂದು ವಿವರಿಸಿದ್ದಾರೆ.

ಶರಣ್ಯಾ ಅವರ ಪೋಸ್ಟ್ ಅನೇಕರನ್ನು ಪ್ರಭಾವಿತಗೊಳಿಸಿದೆ, ಕೆಲವರು ಅವರ ಅದ್ದೂರಿ ಜೀವನಶೈಲಿಯು 2025 ಕ್ಕೆ ಪರಿಪೂರ್ಣವಾದ "ವಿಷನ್ ಬೋರ್ಡ್" ಅನ್ನು ಹೇಗೆ ಮಾಡುತ್ತದೆ ಎಂದು ತಮಾಷೆ ಮಾಡಿದ್ದಾರೆ.

ಒಬ್ಬ ಬಳಕೆದಾರರು ಹಾಸ್ಯಮಯವಾಗಿ "ಆದಾಯ ತೆರಿಗೆ ಇಲಾಖೆ ಈ ರೀಲ್ ಬಗ್ಗೆ ಸಂಪೂರ್ಣ ಟಿಪ್ಪಣಿಗಳನ್ನು ತೆಗೆದುಕೊಳ್ಳುತ್ತಿದ್ದಾರೆ" ಎಂದು ಕಾಮೆಂಟ್ ಮಾಡಿದ್ದಾರೆ, ಆದರೆ ಇನ್ನೊಬ್ಬರು "ನಿರ್ಮಲಾಜಿ" ಎಂದು ವ್ಯಂಗ್ಯವಾಡಿದ್ದಾರೆ.

ಇತರರು ಶರಣ್ಯಾ ಅವರು ಖರ್ಚು ಮಾಡುವ ದಿಟ್ಟ ವಿಧಾನಕ್ಕಾಗಿ ಹೊಗಳಿದರು, ಕೆಲವರು ಇದನ್ನು "ಉತ್ತಮ ರೀತಿಯ ಹೂಡಿಕೆ" ಎಂದು ಕರೆದರು.


Share this Story:

Follow Webdunia kannada

ಮುಂದಿನ ಸುದ್ದಿ

2025 ರಲ್ಲಿ ಸಿಎಂ ಬದಲಾವಣೆ ಪಕ್ಕಾ: ಕರ್ನಾಟಕಕ್ಕೆ ಹೊಸ ಸಿಎಂ ಯಾರಾಗಬೇಕು