ಶ್ರೀನಗರ: ಮೈಕೊರೆಯುವ ಚಳಿ ತಡೆಯದೆ ಉಸಿರುಗಟ್ಟಿ ಒಂದೇ ಕುಟುಂಬದ ಐವರು ಸಾವನ್ನಪ್ಪಿರುವ ಘಟನೆ ಶ್ರೀನಗರ ಜಿಲ್ಲೆಯ ಪಂದ್ರಾಥಾನ್ ಪ್ರದೇಶದಲ್ಲಿ ನಡೆದಿದೆ.
ಬಾರಮುಲ್ಲಾ ಜಿಲ್ಲೆಯಿಂದ ಬಂದಿದ್ದ ಕುಟುಂಬ ಪಂದ್ರಾಥಾನ್ ಪ್ರದೇಶದಲ್ಲಿ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದರು. ಜಿಲ್ಲೆಯಲ್ಲಿರುವ ಚಳಿಯ ಪರಿಣಾಮದಿಂದ ಉಸಿರುಗಟ್ಟಿದ್ದು, ಪ್ರಜ್ಞಾಹೀನರಾಗಿದ್ದರು. ತಕ್ಷಣವೇ ಅವರನ್ನು ಆಸ್ಪತ್ರೆಗೆ ರವಾನಿಸಲಾಯಿತು. ಆದರೆ, ರವಾನಿಸುವ ಮಾರ್ಗದಲ್ಲಿ ಸಾವನ್ನಪ್ಪಿದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ಈ ಬಗ್ಗೆ ದುಃಖ ವ್ಯಕ್ತಪಡಿಸಿದ್ದು, ಆಪ್ತರನ್ನು ಕಳೆದುಕೊಂಡ ಕುಟುಂಬಸ್ಥರಿಗೆ ದೇವರು ನೋವನ್ನು ಭರಿಸುವ ಶಕ್ತಿ ನೀಡಲಿ. ಅಗಲಿದವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಸಂತಾಪ ಸೂಚಿಸಿದ್ದಾರೆ.
ಚಳಿಗಾಲದಲ್ಲಿ ಬಿಸಿಮಾಡುವ ಸಾಧನಗಳನ್ನು ಬಳಸುವಾಗ ಅತ್ಯಂತ ಜಾಗರೂಕರಾಗಿರಿ. ಇಂತಹ ದುರಂತ ಘಟನೆಗಳನ್ನು ತಡೆಗಟ್ಟಲು ಬಿಸಿ ಉಪಕರಣಗಳ ಸುರಕ್ಷಿತ ಬಳಕೆಯ ಸಲಹೆಗಳನ್ನು ಪಾಲಿಸಿ. ವಿವೇಚನೆಯಿಲ್ಲದೇ ಯಾವುದನ್ನು ಕೂಡ ಬಳಸಬೇಡಿ. ಈ ಗ್ಯಾಜೆಟ್‌ಗಳು ಕಾರ್ಬನ್ ಮಾನಾಕ್ಸೈಡ್ ಅನ್ನು ಉತ್ಪಾದಿಸುತ್ತವೆ ಮತ್ತು ಸಂಪೂರ್ಣವಾಗಿ ಮುಚ್ಚಿದ ಕೋಣೆಯಲ್ಲಿ ಈ ಉಪಕರಣಗಳನ್ನು ಬಳಸುವುದು ಮಾರಕ ಎಂದು ತಿಳಿಸಿದರು.