ಗ್ರೀನ್ ಪಟಾಕಿ ಹೊಡೆಯಿರಿ ಎಂಬ ಸುಪ್ರೀಂಕೋರ್ಟ್ ಆದೇಶಕ್ಕೆ ಈ ವರ್ತಕರ ಪ್ರತಿಭಟನೆ ಹೇಗಿತ್ತು ಗೊತ್ತಾ?!

ಗುರುವಾರ, 8 ನವೆಂಬರ್ 2018 (07:37 IST)
ನವದೆಹಲಿ: ದೀಪಾವಳಿ ಸಂದರ್ಭದಲ್ಲಿ ವಾಯು ಮಾಲಿನ್ಯ ತಡೆಗಟ್ಟಲು ಹಸಿರು ಪಟಾಕಿಗಳಿಗೆ ಆದ್ಯತೆ ನೀಡಿ ಎಂದು ಸುಪ್ರೀಂಕೋರ್ಟ್ ನಿರ್ಬಂಧ ವಿಧಿಸಿದ್ದನ್ನು ವಿರೋಧಿಸಿ ದೆಹಲಿಯ ಕೆಲವು ವ್ಯಾಪಾರಿಗಳು ವಿನೂತನ ಪ್ರತಿಭಟನೆ ನಡೆಸಿದ್ದಾರೆ.

ತರಕಾರಿಗಳಲ್ಲಿ ಸುಡುಮದ್ದುಗಳನ್ನು ತುಂಬುವ ಮೂಲಕ ನಾವು ಹಸಿರು ಪಟಾಕಿ ಹೊರ  ತಂದಿದ್ದೇವೆ ಎಂದು ಗೌರವಯುತವಾಗಿಯೇ ಪ್ರತಿಭಟನೆ ನಡೆಸಿದ್ದಾರೆ!

ಹಾಗಲಕಾಯಿ, ದೊಣ್ಣೆ ಮೆಣಸು, ಮೂಲಂಗಿ ಮುಂತಾದ ತರಕಾರಿಗಳ ಒಳಗೆ ಪಟಾಕಿ ಸ್ಟಫ್ ಮಾಡಿ ಪ್ರತಿಭಟನೆ ಸಲ್ಲಿಸಿದ್ದಾರೆ. ದೀಪಾವಳಿ ಸಂದರ್ಭದಲ್ಲಿ ಸುಪ್ರೀಂಕೋರ್ಟ್ ವಿಧಿಸಿರುವ ನಿರ್ಬಂಧದಿಂದಾಗಿ ಪಟಾಕಿ ವ್ಯಾಪಾರಿಗಳಿಗೆ ತೀವ್ರ ನಷ್ಟವಾಗಿದೆ. ಇದೇ ಕಾರಣಕ್ಕೆ ವರ್ತಕರು ಈ ರೀತಿ ಪ್ರತಿಭಟನೆ ನಡೆಸಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.     

ವೆಬ್ದುನಿಯಾವನ್ನು ಓದಿ

ಮುಂದಿನ ಸುದ್ದಿ ಭಿಕ್ಷೆ ಬೇಡುತ್ತಿದ್ದ ವೃದ್ಧೆಯ ಬಳಿಯಿತ್ತು 2 ಲಕ್ಷ ರೂ.!