Publish Date: Sat, 15 Oct 2022 (11:25 IST)
Updated Date: Sat, 15 Oct 2022 (11:03 IST)
ತಿರುನಂತರಪುರಂ : ನರಬಲಿ ಪ್ರಕರಣದ ಬಳಿಕ ಎಚ್ಚೆತ್ತುಕೊಂಡಿರುವ ಕೇರಳ ಸರ್ಕಾರ ಮಾಟ, ಮಂತ್ರಗಳ ತಡೆಗೆ ಕಠಿಣ ಕಾನೂನು ಜಾರಿಗೊಳಿಸಲು ನಿರ್ಧರಿಸಿದೆ.
ಅಲ್ಲದೇ ಮಾಟ, ಮಂತ್ರಗಳ ತಡೆಗೆ ಪ್ರಸ್ತುತವಾಗಿರುವ ಕಾನೂನನ್ನು ಕಟ್ಟುನಿಟ್ಟಾಗಿ ಅನುಷ್ಠಾನಗೊಳಿಸುವ ಅವಶ್ಯಕತೆಯಿದೆ ಎಂದು ಆಡಳಿತಾರೂಢ ಪಕ್ಷ ಹೇಳಿದೆ.
ಗುರುವಾರವಷ್ಟೇ ನರಬಲಿಗೆ ಕಾರಣವಾಗಿದ್ದ ಮಂತ್ರವಾದಿಯನ್ನ ಕೋರ್ಟ್ ಒಪ್ಪಿಸಲಾಗಿದೆ. ಮಾಟ, ಮಂತ್ರಕ್ಕೆ ಮಕ್ಕಳನ್ನು ಬಳಸಿಕೊಳ್ಳುತ್ತಿದ್ದ ದಂಪತಿಯನ್ನ ಬಂಧಿಸಲಾಗಿದೆ.