ತಿರುವನಂತಪುರಂ: ದಕ್ಷಿಣ ಆಫ್ರಿಕಾ ವಿರುದ್ಧ ಟಿ20 ಸರಣಿಯ ಮೊದಲ ಪಂದ್ಯವಾಡಲು ದೇವರ ನಾಡು ಕೇರಳದ ತಿರುವನಂತಪುರಂಗೆ ಬಂದಿಳಿದ ರೋಹಿತ್ ಶರ್ಮಾ ನೇತೃತ್ವದ ಟೀಂ ಇಂಡಿಯಾಗೆ ಭರ್ಜರಿ ಸ್ವಾಗತ ಸಿಕ್ಕಿದೆ.
ವಿಮಾನ ನಿಲ್ದಾಣದಿಂದ ಬಸ್ ನಲ್ಲಿ ತೆರಳುವ ವೇಳೆ ಅಭಿಮಾನಿಗಳು ಬಸ್ ಗೆ ಮುತ್ತಿಗೆ ಹಾಕಿ ಟೀಂ ಇಂಡಿಯಾಗೆ ಚಿಯರ್ ಅಪ್ ಮಾಡಿದ್ದಾರೆ. ಈ ವಿಡಿಯೋಗಳನ್ನು ರೋಹಿತ್ ಶರ್ಮಾ ಹಂಚಿಕೊಂಡಿದ್ದಾರೆ.
ಇನ್ನೊಂದೆಡೆ ಕೇರಳ ಮೂಲದವರೇ ಆದ ಸಂಜು ಸ್ಯಾಮ್ಸನ್ ಅವರ ಫೋಟೋವನ್ನು ಮೊಬೈಲ್ ನಲ್ಲಿ ಅಭಿಮಾನಿಗಳತ್ತ ತೋರಿಸಿ ಅಭಿಮಾನಿಗಳಿಗೆ ಮತ್ತಷ್ಟು ಖುಷಿ ನೀಡಿದ್ದಾರೆ. ನಾಳೆ ಮೊದಲ ಪಂದ್ಯ ನಡೆಯಲಿದೆ.