Publish Date: Mon, 26 Sep 2022 (08:10 IST)
Updated Date: Mon, 26 Sep 2022 (08:48 IST)
ಹೈದರಾಬಾದ್: ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಮೂರನೇ ಟಿ20 ಪಂದ್ಯದಲ್ಲಿ ದಿನೇಶ್ ಕಾರ್ತಿಕ್ ಗೆ ನಾಯಕ ರೋಹಿತ್ ಶರ್ಮಾ ಮೈದಾನದಲ್ಲಿ ಕಿಸ್ ಮಾಡಿ ಸಂತೋಷ ವ್ಯಕ್ತಪಡಿಸಿದ್ದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಗ್ಲೆನ್ ಮ್ಯಾಕ್ಸ್ ವೆಲ್ ರನ್ನು ದಿನೇಶ್ ಕಾರ್ತಿಕ್ ರನೌಟ್ ಮಾಡಲು ಹೋದಾಗ ಮೊದಲು ಅವರ ಕೈ ಬೇಲ್ಸ್ ಗೆ ತಗುಲಿ ಲೈಟ್ ಬಂದಿತ್ತು. ಆದರೆ ಬಾಲ್ ದೂರ ಸರಿದಿತ್ತು. ಹೀಗಾಗಿ ಎಲ್ಲರೂ ದಿನೇಶ್ ಕಾರ್ತಿಕ್ ಬಾಲ್ ತಾಗಿಸದೇ ಕೇವಲ ಕೈ ತಗುಲಿಸಿ ತಪ್ಪು ಮಾಡಿದರು ಎಂದೇ ಅಂದುಕೊಂಡಿದ್ದರು.
ಆದರೆ ಥರ್ಡ್ ಅಂಪಾಯರ್ ಹಲವು ಆಂಗಲ್ ಗಳಲ್ಲಿ ನೋಡಿದಾಗ ಮ್ಯಾಕ್ಸ್ ವೆಲ್ ಕ್ರೀಸ್ ಗೆ ಬರುವ ಮೊದಲೇ ಬಾಲ್ ಒಂದು ಬೇಲ್ಸ್ ಎಗರಿಸಿದ್ದು ಸ್ಪಷ್ಟವಾಗಿತ್ತು. ಹೀಗಾಗಿ ಮ್ಯಾಕ್ಸ್ ವೆಲ್ ರನೌಟ್ ಆದರು. ಇದರಿಂದ ಖುಷಿಯಾದ ರೋಹಿತ್ ದಿನೇಶ್ ಕಾರ್ತಿಕ್ ರನ್ನು ಅಪ್ಪಿ ತಲೆ ಮೇಲೊಂದು ಪ್ರೀತಿಯ ಪಪ್ಪಿ ಕೊಟ್ಟರು! ಕಳೆದ ಪಂದ್ಯದಲ್ಲಿ ದಿನೇಶ್ ತಪ್ಪು ಮಾಡಿದಾಗ ತಮಾಷೆಯಿಂದ ಕುತ್ತಿಗೆ ಹಿಡಿದು ಸಿಟ್ಟು ತೀರಿಸಿಕೊಂಡಿದ್ದ ರೋಹಿತ್ ಈ ಪಂದ್ಯದಲ್ಲಿ ಪಪ್ಪಿ ಕೊಟ್ಟಿದ್ದು ಸೋಷಿಯಲ್ ಮೀಡಿಯಾದಲ್ಲಿ ಭಾರೀ ಸದ್ದು ಮಾಡಿತು.