ಮುಂಬೈ: ಕೊರೋನಾದಿಂದಾಗಿ ಕೊನೆಯ ಕ್ಷಣದಲ್ಲಿ ಆಸ್ಟ್ರೇಲಿಯಾ ವಿರುದ್ಧದ ಟಿ20 ಸರಣಿಯಿಂದ ಹೊರಬಿದ್ದಿರುವ ಟೀಂ ಇಂಡಿಯಾ ವೇಗಿ ಮೊಹಮ್ಮದ್ ಶಮಿ ಮುಂಬರುವ ದ.ಆಫ್ರಿಕಾ ಸರಣಿಯಲ್ಲೂ ಪಾಲ್ಗೊಳ್ಳುವುದು ಅನುಮಾನವಾಗಿದೆ.
ಸೆಪ್ಟೆಂಬರ್ 28 ರಿಂದ ತವರಿನಲ್ಲಿ ದ.ಆಫ್ರಿಕಾ ವಿರುದ್ಧ ಟೀಂ ಇಂಡಿಯಾ ಮೂರು ಪಂದ್ಯಗಳ ಟಿ20 ಸರಣಿ ಆಡಲಿದೆ. ಈ ಸರಣಿಗೂ ಟೀಂ ಇಂಡಿಯಾ ಈಗಾಗಲೇ ಪ್ರಕಟವಾಗಿದೆ.
ಆದರೆ ಮೊಹಮ್ಮದ್ ಶಮಿ ಇನ್ನೂ ಫಿಟ್ನೆಸ್ ಸಾಬೀತುಪಡಿಸಿಲ್ಲ. ಹೀಗಾಗಿ ದ.ಆಫ್ರಿಕಾ ಸರಣಿಯಲ್ಲೂ ಅವರು ಪಾಲ್ಗೊಳ್ಳುವುದು ಅನುಮಾನವಾಗಿದೆ.