Select Your Language

Notifications

webdunia
webdunia
webdunia
webdunia

ಭಾರತ-ಆಸೀಸ್ ಟಿ20: ಟೀಂ ಇಂಡಿಯಾ ಆಡುವ ಬಳಗದಲ್ಲಿ ಬದಲಾವಣೆ ನಿರೀಕ್ಷೆ

ಭಾರತ-ಆಸೀಸ್ ಟಿ20: ಟೀಂ ಇಂಡಿಯಾ ಆಡುವ ಬಳಗದಲ್ಲಿ ಬದಲಾವಣೆ ನಿರೀಕ್ಷೆ
ಹೈದರಾಬಾದ್ , ಭಾನುವಾರ, 25 ಸೆಪ್ಟಂಬರ್ 2022 (08:30 IST)
ಹೈದರಾಬಾದ್: ಆಸ್ಟ್ರೇಲಿಯಾ ವಿರುದ್ಧ ಇಂದು ನಿರ್ಣಾಯಕ ಟಿ20 ಪಂದ್ಯ ಆಡಲಿಳಿಯಲಿರುವ ಟೀಂ ಇಂಡಿಯಾದಲ್ಲಿ ಕೆಲವು ಬದಲಾವಣೆ ನಿರೀಕ್ಷಿಸಬಹುದು.

ಭಾರತಕ್ಕೆ ಎಲ್ಲಕ್ಕಿಂತ ದೊಡ್ಡ ತಲೆನೋವಾಗಿರುವುದು ಬೌಲಿಂಗ್. ಅಕ್ಸರ್ ಪಟೇಲ್ ಒಬ್ಬರೇ ಕಳೆದ ಎರಡೂ ಪಂದ್ಯಗಳಲ್ಲಿ ಉತ್ತಮ ನಿರ್ವಹಣೆ ತೋರಿದ್ದರು. ಜಸ್ಪ್ರೀತ್ ಬುಮ್ರಾ ಕಳೆದ ಪಂದ್ಯದಲ್ಲಿ ಕಮ್ ಬ್ಯಾಕ್ ಮಾಡಿದ್ದರು. ಈ ಪಂದ್ಯದಲ್ಲೂ ಅವರು ಆಡುವ ನಿರೀಕ್ಷೆಯಿದೆ. ಹೀಗಾಗಿ ಭುವನೇಶ್ವರ್ ಕುಮಾರ್ ಹೊರಗುಳಿಯುವ ಸಾಧ್ಯತೆಯಿದೆ. ಹರ್ಷಲ್ ಪಟೇಲ್ ಇನ್ನೂ ಲಯಕ್ಕೆ ಬಂದಿಲ್ಲ. ಯಜುವೇಂದ್ರ ಚಾಹಲ್ ಕಳೆದ ದುಬಾರಿಯಾಗಿದ್ದರು. ಹಾಗಿದ್ದರೂ ಅವರನ್ನು ಬದಲಾಯಿಸುವ ಸಾಧ‍್ಯತೆ ಕಡಿಮೆ.

ಇನ್ನು, ಬ್ಯಾಟಿಂಗ್ ವಿಭಾಗದಲ್ಲಿ ದಿನೇಶ್ ಕಾರ್ತಿಕ್ ಅಥವಾ ರಿಷಬ್ ಪಂತ್ ಇಬ್ಬರಲ್ಲಿ ಒಬ್ಬರು ಮಾತ್ರ ಸ್ಥಾನ ಪಡೆಯಬಹುದು. ವಿರಾಟ್ ಕೊಹ್ಲಿ ಬ್ಯಾಟ್ ನಿಂದ ಇನ್ನೂ ರನ್ ಹರಿದುಬಂದಿಲ್ಲ.

Share this Story:

Follow Webdunia kannada

ಮುಂದಿನ ಸುದ್ದಿ

ಜೂಲಾನ್ ಗೋಸ್ವಾಮಿಗೆ ಗೆಲುವಿನ ವಿದಾಯ ಹೇಳಿದ ಭಾರತ ಮಹಿಳಾ ಕ್ರಿಕೆಟ್ ತಂಡ