Publish Date: Sun, 25 Sep 2022 (20:44 IST)
Updated Date: Sun, 25 Sep 2022 (20:46 IST)
ಹೈದರಾಬಾದ್: ಭಾರತ ಮತ್ತು ಆಸ್ಟ್ರೇಲಿಯಾ ನಡುವೆ ನಡೆಯುತ್ತಿರುವ ಮೂರನೇ ಟಿ20 ಪಂದ್ಯದಲ್ಲಿ ಟೀಂ ಇಂಡಿಯಾ ಪ್ರಮುಖ ಬೌಲರ್ ಗಳು ಮತ್ತೆ ವೈಫಲ್ಯ ಅನುಭವಿಸಿದ್ದಾರೆ.
ಮೊದಲು ಬ್ಯಾಟಿಂಗ್ ಮಾಡಿದ ಆಸ್ಟ್ರೇಲಿಯಾ 20 ಓವರ್ ಗಳಲ್ಲಿ 7 ವಿಕೆಟ್ ನಷ್ಟಕ್ಕೆ 186 ರನ್ ಗಳಿಸಿದೆ. ಆರಂಭದಲ್ಲಿ ಕ್ಯಾಮರೂನ್ ಗ್ರೀನ್ ಅಬ್ಬರಿಸಿದರೆ ಕೊನೆಯಲ್ಲಿ ಟಿಮ್ ಡೇವಿಡ್, ಡೇನಿಯಲ್ ಸ್ಯಾಮ್ಸ್ ಭರ್ಜರಿ ಬ್ಯಾಟಿಂಗ್ ನಡೆಸಿದರು. ಮಧ್ಯಮ ಕ್ರಮಾಂಕದಲ್ಲಿ ಸ್ಪಿನ್ನರ್ ಗಳು ರನ್ ಹೊಳೆಗೆ ಕೊಂಚ ನಿಯಂತ್ರಣ ಹೇರಿದ್ದರು.
ಕ್ಯಾಮರೂನ್ ಗ್ರೀನ್ ಕೇವಲ 21 ಎಸೆತಗಳಿಂದ 52 ರನ್ ಗಳಿಸಿ ಔಟಾದರೆ ಟಿಮ್ ಡೇವಿಡ್ 27 ಎಸೆತಗಳಿಂದ 54 ರನ್ ಗಳಿಸಿ ಔಟಾದರೆ ಸ್ಯಾಮ್ಸ್ 20 ಎಸೆತಗಳಿಂದ 28 ರನ್ ಚಚ್ಚಿದರು. ಭಾರತದ ಪರ ಹಾರ್ದಿಕ್ ಪಾಂಡ್ಯ, ಜಸ್ಪ್ರೀತ್ ಬುಮ್ರಾ ಬೌಲಿಂಗ್ ನಲ್ಲಿ ಕೈ ಕೊಟ್ಟರು. ಅಕ್ಸರ್ ಪಟೇಲ್ 3 ವಿಕೆಟ್ ಕಬಳಿಸಿದರೆ ಯಜುವೇಂದ್ರ ಚಾಹಲ್, ಭುವನೇಶ್ವರ್ ಕುಮಾರ್, ಹರ್ಷಲ್ ಪಟೇಲ್ ತಲಾ 1 ವಿಕೆಟ್ ಪಡೆದರು. ಇನ್ನೊಂದು ವಿಕೆಟ್ ನ್ನು ಅಕ್ಸರ್ ರನೌಟ್ ರೂಪದಲ್ಲಿ ಪಡೆದರು.