Publish Date: Mon, 26 Sep 2022 (10:09 IST)
Updated Date: Mon, 26 Sep 2022 (10:15 IST)
ಹೈದರಾಬಾದ್: ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಮೂರನೇ ಟಿ20 ಪಂದ್ಯದಲ್ಲಿ ವಿರಾಟ್ ಕೊಹ್ಲಿ 48 ಎಸೆತಗಳಿಂದ 63 ರನ್ ಗಳಿಸಿ ತಂಡಕ್ಕೆ ಬುನಾದಿ ಹಾಕಿಕೊಟ್ಟರು.
ಒಂದೆಡೆ ಸೂರ್ಯಕುಮಾರ್ ಯರ್ರಾ ಬಿರ್ರಿ ರನ್ ಚಚ್ಚುತ್ತಿದ್ದರೆ ಕೊಹ್ಲಿ ಉತ್ತಮ ಜೊತೆಗಾರನ ಪಾತ್ರ ಮಾಡಿದರು. ಬೌಂಡರಿ, ಸಿಕ್ಸರ್ ಗಿಂತ ಸಿಂಗಲ್ಸ್, ಎರಡು ರನ್ ತೆಗೆದುಕೊಂಡು ಸೂರ್ಯಗೆ ಹೆಚ್ಚು ಬ್ಯಾಟಿಂಗ್ ಮಾಡಲು ಅವಕಾಶ ಕೊಟ್ಟರು.
ಅವರು ಈ ರೀತಿ ಮಾಡಲು ಕಾರಣವೇನೆಂದು ಪಂದ್ಯದ ನಂತರ ಕೊಹ್ಲಿಯೇ ಹೇಳಿದ್ದಾರೆ. ಸೂರ್ಯ ಬಿರುಸಿನ ಆಟವಾಡುತ್ತಿದ್ದಾಗ ನಾನು ಡಗ್ ಔಟ್ ಕಡೆ ನೋಡಿದ್ದೆ. ಆಗ ರಾಹುಲ್ ಭಾಯ್ (ಕೋಚ್ ದ್ರಾವಿಡ್) ಮತ್ತು ರೋಹಿತ್ ನೀನು ನಿಂತು ಆಡುತ್ತಿರು ಎಂದು ಸಂದೇಶ ಕೊಟ್ಟರು. ಹೀಗಾಗಿ ನನ್ನ ಅನುಭವವನ್ನು ಬಳಸಿ ನಾನು ಸೂರ್ಯಗೆ ಉತ್ತಮ ಜೊತೆಗಾರನಾಗಬೇಕಾದ ಅಗತ್ಯವಿತ್ತು. ಹೀಗಾಗಿ ನಿಂತು ಆಡಲು ತೀರ್ಮಾನಿಸಿದೆ ಎಂದು ಹೇಳಿದ್ದಾರೆ.