Select Your Language

Notifications

webdunia
webdunia
webdunia
webdunia

RSSನ್ನೂ ಬ್ಯಾನ್ ಮಾಡಿ : ಕೇರಳ ವಿಪಕ್ಷಗಳ ಒತ್ತಾಯ

RSSನ್ನೂ ಬ್ಯಾನ್ ಮಾಡಿ : ಕೇರಳ ವಿಪಕ್ಷಗಳ ಒತ್ತಾಯ
ತಿರುವನಂತಪುರಂ , ಗುರುವಾರ, 29 ಸೆಪ್ಟಂಬರ್ 2022 (07:09 IST)
ತಿರುವನಂತಪುರಂ : ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಬ್ಯಾನ್ ಮಾಡಿರುವ ಕೇಂದ್ರ ಸರ್ಕಾರದ ನಿರ್ಧಾರವನ್ನು ಕೇರಳದ ಕಾಂಗ್ರೆಸ್ ಹಾಗೂ ಅದರ ಮಿತ್ರ ಪಕ್ಷ ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್ ಸ್ವಾಗತಿಸಿದೆ.

ಅಲ್ಲದೇ ಪಿಎಫ್ಐನಂತೆಯೇ ಆರ್ಎಸ್ಎಸ್ ಕೂಡ ಬ್ಯಾನ್ ಮಾಡಬೇಕು ಎಂದು ಒತ್ತಾಯಿಸಿವೆ. PFIನ ಚಟುವಟಿಕೆಗಳನ್ನು ತೀವ್ರವಾಗಿ ಖಂಡಿಸಿದ (ಮುಸ್ಲಿಂ ಲೀಗ್) ನ ಹಿರಿಯ ನಾಯಕ ಎಂ.ಕೆ.ಮುನೀರ್,

ಈ ಸಂಘಟನೆಯು ಕುರಾನ್ ಅನ್ನು ತಪ್ಪಾಗಿ ಅರ್ಥೈಸಿದೆ. ಹಿಂಸಾಚಾರದ ಮಾರ್ಗವನ್ನು ಅಳವಡಿಸಿಕೊಳ್ಳಲು ಸಮುದಾಯದವರನ್ನು ಪ್ರೇರಿಪಿಸಿದೆ ಎಂದು ಟೀಕಿಸಿದ್ದಾರೆ.

ಪಿಎಫ್ಐ ಯುವ ಪೀಳಿಗೆಯನ್ನು ದಾರಿತಪ್ಪಿಸಲು ಪ್ರಯತ್ನಿಸುತ್ತಿದೆ. ಅಲ್ಲದೇ ಸಮಾಜದಲ್ಲಿ ಒಡಕು ಮತ್ತು ದ್ವೇಷ ಸೃಷ್ಟಿಸಲು ಪ್ರಯತ್ನಿಸಿದೆ ಎಂದು ಗಂಭೀರ ಆರೋಪ ಮಾಡಿದ್ದಾರೆ.


Share this Story:

Follow Webdunia kannada

ಮುಂದಿನ ಸುದ್ದಿ

ಕೇಂದ್ರ ಸರ್ಕಾರಿ ನೌಕರರಿಗೆ ಗುಡ್ ನ್ಯೂಸ್!