ತಿರುಪತಿ: ಮೊನ್ನೆಯಷ್ಟೇ ವೈಕುಂಠ ಏಕಾದಶಿ ಸಂದರ್ಭದಲ್ಲಿ ಕಾಲ್ತುಳಿತದಿಂದಾಗಿ ತಿರುಪತಿಯಲ್ಲಿ ಸಾವು-ನೋವುಗಳಾಗಿತ್ತು. ಇದರ ಬೆನ್ನಲ್ಲೇ ಈಗ ಮತ್ತೊಂದು ದುರಂತ ಸಂಭವಿಸಿದ್ದು ಭಕ್ತರು ಇದು ತಿಮ್ಮಪ್ಪನ ಕೋಪಾಗ್ನಿಯೇ ಎಂದು ಸಂಶಯ ಪಡುವಂತಾಗಿದೆ.
ಇಂದು ತಿರುಪತಿಯ ಲಡ್ಡು ಕೌಂಟರ್ ನಲ್ಲಿ ಇದ್ದಕ್ಕಿದ್ದಂತೆ ಬೆಂಕಿ ಕಾಣಿಸಿಕೊಂಡಿದೆ. ಬೆಂಕಿ ಕಾಣಿಸಿಕೊಂಡ ಬೆನ್ನಲ್ಲೇ ಭಕ್ತರು ಭಯದಿಂದ ಓಡಿ ಹೋಗಿದ್ದಾರೆ. ವಿದ್ಯುತ್ ಸರಬರಾಜಿನಲ್ಲಿ ಉಂಟಾದ ಶಾರ್ಟ್ ಸರ್ಕ್ಯೂಟ್ ನಿಂದಾಗಿ ಘಟನೆ ನಡೆದಿದೆ ಎನ್ನಲಾಗಿದೆ.
ಕೌಂಟರ್ ಸಂಖ್ಯೆ 47 ರಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಈ ವೇಳೆ ಲಡ್ಡು ಪ್ರಸಾದಕ್ಕಾಗಿ ಕಾದು ನಿಂತಿದ್ದ ಭಕ್ತರು ಭಯದಿಂದ ಓಡಿ ಹೋಗಿದ್ದಾರೆ. ತಕ್ಷಣವೇ ಬೆಂಕಿ ನಂದಿಸುವ ಕೆಲಸ ಮಾಡಲಾಗಿದೆ. ಈಗ ಪರಿಸ್ಥಿತಿ ನಿಯಂತ್ರಣದಲ್ಲಿದೆ.
ಈ ಹಿಂದೆ ಜಗನ್ ಆಡಳಿತದ ಸಂದರ್ಭದಲ್ಲಿ ತಿರುಪತಿ ಲಡ್ಡಿಗೆ ಪ್ರಾಣಿಗಳ ಕೊಬ್ಬು ಬಳಕೆ ಮಾಡಲಾಗುತ್ತಿತ್ತು ಎಂದು ಲ್ಯಾಬ್ ಪರೀಕ್ಷಾ ವರದಿಗಳು ಹೇಳಿದ್ದವು. ಇದಾದ ಬಳಿಕ ತಿರುಪತಿಯಲ್ಲಿ ಶುದ್ಧೀಕಾರ್ಯಗಳೂ ನಡೆದವು. ಆದರೆ ಈ ಘಟನೆ ಬೆಳಕಿಗೆ ಬಂದ ಬಳಿಕ ತಿರುಪತಿಯಲ್ಲಿ ನಡೆಯುತ್ತಿರುವ ಎರಡನೇ ದುರಂತ ಇದಾಗಿದೆ. ಹೀಗಾಗಿ ಕೆಲವರು ಇದು ತಿಮ್ಮಪ್ಪ ಕೋಪಗೊಂಡಿದ್ದಾನೆ ಎನ್ನುವುದರ ಸೂಚನೆಯಿರಬಹುದು ಎನ್ನುತ್ತಿದ್ದಾರೆ.