ಮೊಬೈಲ್ ಡಾಟಾ ಬೇಗನೇ ಮುಗಿಯುತ್ತಿದ್ದರೆ ಉಳಿಸಲು ಈ ಟಿಪ್ಸ್ ಪಾಲಿಸಿ

Krishnaveni K
ಶನಿವಾರ, 27 ಜನವರಿ 2024 (08:40 IST)
ಬೆಂಗಳೂರು: ದಿನಕ್ಕೆ ಎಷ್ಟೇ ಜಿಬಿ ಇಂಟರ್ ನೆಟ್ ಪ್ಲ್ಯಾನ್ ಹಾಕಿಸಿಕೊಂಡರೂ ಬೇಗನೇ ಡಾಟಾ ಖಾಲಿಯಾಗುತ್ತಿದೆ ಎಂದು ಚಿಂತೆಯಾಗುತ್ತಿದೆಯಾ? ಹಾಗಿದ್ದರೆ ಮೊಬೈಲ್ ಡಾಟಾ ಬೇಗನೇ ಮುಗಿಯಲು ಕಾರಣ ಮತ್ತು ಪರಿಹಾರವೇನೆಂದು ನೋಡಿ.

ನಮ್ಮ ಕೈಯಲ್ಲಿರುವ ಮೊಬೈಲ್ ಈಗ ಅವಿಭಾ‍ಜ್ಯ ಅಂಗವಾಗಿದೆ. ವ್ಯಾವಹಾರಿಕವಾಗಿ ಎಲ್ಲಾ ವಿಚಾರಗಳಿಗೂ ಮೊಬೈಲ್ ನ್ನು ಅವಲಂಬಿಸಿರುತ್ತೇವೆ. ಹೀಗಾಗಿ ಮೊಬೈಲ್ ನಲ್ಲಿ ಇಂಟರ್ ನೆಟ್ ಬಳಕೆ ಅನಿವಾರ್ಯ.

ಮೊಬೈಲ್ ನಲ್ಲಿ ಸಾಮಾನ್ಯವಾಗಿ ಇನ್ ಬಿಲ್ಟ್ ಆಪ್ ಗಳ ಜೊತೆಗೆ ನಮಗೆ ಬೇಕಾದ ಅನೇಕ ಆಪ್ ಗಳನ್ನು ಡೌನ್ ಲೋಡ್ ಮಾಡಿಕೊಂಡಿರುತ್ತೇವೆ. ಪ್ರತಿನಿತ್ಯ ಸೋಷಿಯಲ್ ಮೀಡಿಯಾಗಳಾದ ಇನ್ ಸ್ಟಾಗ್ರಾಂ, ಯೂ ಟ್ಯೂಬ್, ವ್ಯಾಟ್ಸಪ್, ಫೇಸ್ ಬುಕ್ ನ್ನು ಹೆಚ್ಚಾಗಿ ಬಳಕೆ ಮಾಡುತ್ತೇವೆ.

ಈ ರೀತಿ ಸಾಕಷ್ಟು ಆಪ್ ಗಳನ್ನು ಡೌನ್ ಲೋಡ್ ಮಾಡಿಕೊಳ್ಳುವುದರಿಂದ ಮತ್ತು ಅದನ್ನು ಹೆಚ್ಚು ಬಳಕೆ ಮಾಡುವುದರಿಂದ ಸಹಜವಾಗಿಯೇ ಇಂಟರ್ ನೆಟ್ ಕೂಡಾ ಹೆಚ್ಚು ಬಳಕೆಯಾಗುತ್ತದೆ. ಇದರ ಜೊತೆಗೆ ನಮಗೆ ಅರಿವೇ ಇಲ್ಲದಂತೆ ಆಪ್ ಗಳನ್ನು ಅಪ್ ಡೇಟ್ ಮಾಡಲು ಅಟೋ ಅಪ್ ಡೇಟ್ ಮೋಡ್ ಆನ್ ಮಾಡಿರುತ್ತೇವೆ. ಇದರಿಂದಾಗಿ ನಮಗೆ ಬೇಕೋ, ಬೇಡವೋ ಒಟ್ಟಿನಲ್ಲಿ ನಮ್ಮ ಮೊಬೈಲ್ ಇಂಟರ್ ನೆಟ್ ನ್ನು ಬಳಸಿ ಈ ಆಪ್ ಗಳು ಅಪ್ ಡೇಟ್ ಆಗುತ್ತಿರುತ್ತವೆ.

ಇಂಟರ್ ನೆಟ್ ಉಳಿತಾಯ ಮಾಡಲು ಉಪಾಯಗಳು
  1. ಡಾಟಾ ಬಳಕೆಯನ್ನು ಕಡಿಮೆ ಮಾಡಿ. ಹೆಚ್ಚು ಹೊತ್ತು ಮೊಬೈಲ್ ಬಳಸುವುದನ್ನು ನಿಯಂತ್ರಿಸಿ.
  2. ಡಾಟಾ ಬಳಕೆ ಮಾಡದೇ ಇದ್ದಾಗ ಡಾಟಾ ಆಫ್ ಮಾಡಿಟ್ಟುಕೊಳ್ಳಿ. ಇದರಿಂದ ಅಟೋ ಅಪ್ ಡೇಟ್ ಆಗುವುದು ತಪ್ಪುತ್ತದೆ.
  3. ಅಟೋ ಸಿಂಕ್ ಡಿಸೇಬಲ್ ಮಾಡಿ.
  4. ವೈಫೈ ಲಭ್ಯವಿದ್ದಾಗ ಡಾಟಾ ಆಫ್ ಮಾಡಿ ವೈಫೈ ಬಳಸಿ.
  5. ಮ್ಯಾಪ್ ನ್ನು ಆನ್ ಲೈನ್ ನೋಡುವುದರ ಬದಲು ಡೌನ್ ಲೋಡ್ ಮಾಡಿಟ್ಟುಕೊಳ್ಳಿ.
  6. ಕ್ಯಾಚೆಗಳನ್ನು ಡಿಲೀಟ್ ಮಾಡಲು ಹೋಗಬೇಡಿ. ಮೆಮೊರಿ ಬೇಕೆಂದು ಕ್ಯಾಚೆಗಳನ್ನು ಡಿಲೀಟ್ ಮಾಡಿದರೆ ಮೊಬೈಲ್ ಮತ್ತೆ ತನ್ನಿಂದ ತಾನೇ ಅವುಗಳನ್ನು ಮತ್ತೆ ಡೌನ್ ಲೋಡ್ ಮಾಡಿಕೊಳ್ಳುತ್ತವೆ.
  7. ಬೇಡದೇ ಬರುವ ನೋಟಿಫಿಕೇಶನ್ ಗಳನ್ನು ಆಫ್ ಮಾಡಿ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಕರೂರ್ ಕಾಲ್ತುಳಿತ: ಸಂತ್ರಸ್ತರ ಭೇಟಿಗೆ ವ್ಯವಸ್ಥೆ ಮಾಡಿದ ನಟ ವಿಜಯ್

ಯಮುನಾ ನೀರು ಶುದ್ಧವಾಗಿದೆಯೆಂದ ರೇಖಾ ಗುಪ್ತಾ ಕುಡಿದು ತೋರಿಸಲಿ: ಆ್ಯಪ್ ಸವಾಲು

7 ವರ್ಷದ ಬಾಲಕಿಯನ್ನು ಕೊಚ್ಚಿ ಕೊಂದ ಮಲತಂದೆ, ಕಾರಣ ಕೇಳಿದ್ರೆ ಶಾಕ್‌

ಉ.ಪ್ರದೇಶ: 5 ದೇವಸ್ಥಾನದ ಗೋಡೆಯಲ್ಲಿ ಐ ಲವ್ ಮುಹಮ್ಮದ್ ಬರಹ, ಉದ್ವಿಗ್ನ ವಾತಾವರಣ ಸೃಷ್ಟಿ

Kurnool Bus Accident: ಡಿಕ್ಕಿ ಹೊಡೆದ ಬೈಕ್ ಸವಾರರ ವಿಡಿಯೋ ವೈರಲ್

ಮುಂದಿನ ಸುದ್ದಿ
Show comments