Select Your Language

Notifications

webdunia
webdunia
webdunia
webdunia

ಬಿಹಾರದಿಂದ ರಾಜ್ಯಸಭೆಗೆ ಕನ್ನಡಿಗನಿಗೆ ಟಿಕೆಟ್

ಬಿಹಾರದಿಂದ ರಾಜ್ಯಸಭೆಗೆ ಕನ್ನಡಿಗನಿಗೆ ಟಿಕೆಟ್
ಪಾಟ್ನಾ , ಸೋಮವಾರ, 16 ಮೇ 2022 (15:35 IST)
ಪಾಟ್ನಾ: ಬಿಹಾರದಿಂದ ರಾಜ್ಯಸಭೆ ಉಪಚುನಾವಣೆಗೆ ಕನ್ನಡಿಗ ಅನಿಲ್ ಹೆಗ್ಡೆ ಅವರಿಗೆ ಜೆಡಿಯು ಟಿಕೆಟ್ ನೀಡಿದೆ. ಮೂಲತಃ ಮಂಗಳೂರಿನವರಾಗಿದ್ದ ಅನಿಲ್ ಹೆಗ್ಡೆ ಅವರು ಸುದೀರ್ಘ ಅವಧಿ ವರೆಗೆ ಜಾರ್ಜ್ ಫರ್ನಾಂಡಿಸ್ ಅವರ ಕಾರ್ಯದರ್ಶಿಯಾಗಿದ್ದರು.
 
ಮಹೇಂದ್ರ ಪ್ರಸಾದ್ ಅವರ ನಿಧನದಿಂದ ತೆರವಾದ ರಾಜ್ಯಸಭಾ ಉಪಚುನಾವಣೆಗೆ ಜೆಡಿಯು ಮಂಗಳೂರು ಮೂಲದ ಅನಿಲ್ ಹೆಗ್ಡೆ ಅವರನ್ನು ಕಣಕ್ಕಿಳಿಸಿದೆ. ಕಳೆದ ವರ್ಷ ಡಿಸೆಂಬರ್ 27 ರಂದು ಜನತಾ ದಳ ಯುನೈಟೆಡ್ (ಜೆಡಿಯು) ಸಂಸದ ಮಹೇಂದ್ರ ಪ್ರಸಾದ್ ಅವರ ನಿಧನದ ನಂತರ ತೆರವಾದ ರಾಜ್ಯಸಭಾ ಸ್ಥಾನಕ್ಕೆ ಬಿಹಾರದಲ್ಲಿ ಉಪಚುನಾವಣೆ ನಡೆಯುತ್ತಿದೆ. ಇದೇ ಮೇ 30ರಂದು ಉಪಚುನಾವಣೆ ನಡೆಯಲಿದೆ.
 
ಕಿಂಗ್ ಮಹೇಂದ್ರ ಎಂದೇ ಖ್ಯಾತರಾಗಿರುವ ಮಹೇಂದ್ರ ಪ್ರಸಾದ್ ಅವರು ವಿವಿಧ ರಾಜಕೀಯ ಪಕ್ಷಗಳ ಅಭ್ಯರ್ಥಿಯಾಗಿ ದಾಖಲೆಯ ಏಳನೇ ಬಾರಿಗೆ ರಾಜ್ಯಸಭೆಗೆ ಆಯ್ಕೆಯಾಗಿದ್ದರು. 
 

Share this Story:

Follow Webdunia kannada

ಮುಂದಿನ ಸುದ್ದಿ

ಶಾಂತಿ ನೆಮ್ಮದಿ ನೆಲೆಸಲು ಎಲ್ಲರೂ ಸಹಕರಿಸಬೇಕು: ಪೇಜಾವರ ಶ್ರೀ