Select Your Language

Notifications

webdunia
webdunia
webdunia
webdunia

G20 ಸಭೆಗೆ ಆಗಮಿಸುತ್ತಿರೋ ಜೋ ಬೈಡನ್‌ಗಾಗಿ ಮೂರು ಹಂತದ ಬಿಗಿಭದ್ರತೆ

G20 ಸಭೆಗೆ ಆಗಮಿಸುತ್ತಿರೋ ಜೋ ಬೈಡನ್‌ಗಾಗಿ ಮೂರು ಹಂತದ ಬಿಗಿಭದ್ರತೆ
ನವದೆಹಲಿ , ಗುರುವಾರ, 7 ಸೆಪ್ಟಂಬರ್ 2023 (14:57 IST)
ನವದೆಹಲಿ : ಭಾರತದಲ್ಲಿ ಜಿ20 ಶೃಂಗಸಭೆ ಹಿನ್ನೆಲೆ ಅಮೆರಿಕಾದ ಅಧ್ಯಕ್ಷರು ದೆಹಲಿಗೆ ಆಗಮಿಸುತ್ತಿದ್ದು ಜೋ ಬೈಡನ್ಗಾಗಿ ಮೂರು ಹಂತದ ಭದ್ರತೆ ಒದಗಿಸಲಾಗುತ್ತಿದೆ.

ಶುಕ್ರವಾರ ಸಂಜೆ 7 ಗಂಟೆಗೆ ಬೋಯಿಂಗ್ ಸಿ -17 ಗ್ಲೋಬ್ ಮಾಸ್ಟರ್ III ನಲ್ಲಿ ಯುಎಸ್ ಮೂಲಕ ಆಗಮಿಸುತ್ತಿದ್ದು, ಐಟಿಸಿ ಮೌರ್ಯ ಹೋಟೆಲ್ನಲ್ಲಿ ತಂಗಲಿದ್ದಾರೆ.

ಅಮೆರಿಕಾದ ಅಧ್ಯಕ್ಷರ ವಾಸ್ತವ್ಯಕ್ಕೆ 400 ಕೊಠಡಿಗಳ ಇಡೀ ಹೋಟೆಲ್ ಬುಕ್ ಮಾಡಲಾಗಿದ್ದು, 14 ಮಹಡಿಯಲ್ಲಿರುವ ವಿಶೇಷ ಕೊಠಡಿಯಲ್ಲಿ ಅವರು ತಂಗಲಿದ್ದಾರೆ. ದೆಹಲಿಯಲ್ಲಿ ಸಂಚರಿಸಲು ಬುಲೆಟ್ ಪ್ರೂಫ್ ದಿ ಬೀಸ್ಟ್ ಕಾರನ್ನು ಬಳಕೆ ಮಾಡಲಾಗುತ್ತಿದೆ.

ಇನ್ನು ಅವರ ಸಂಚಾರ ಸಮಯದಲ್ಲಿ ಭದ್ರತೆಗೆ ಹೊರ ಅಥವಾ ಮೂರನೇ ಪದರದಲ್ಲಿ ಅರೆಸೇನಾ ಪಡೆಯ ಸಿಬ್ಬಂದಿಯನ್ನು, ಎರಡನೇ ಪದರವು ಭಾರತದ ವಿಶೇಷ ರಕ್ಷಣಾ ಗುಂಪಿನ ಕಮಾಂಡೋಗಳನ್ನು ಮತ್ತು ಒಳಗಿನ ವಲಯವು ರಹಸ್ಯ ಸೇವಾ ಏಜೆಂಟ್ಗಳನ್ನು ಹೊಂದಿರುತ್ತದೆ ಎಂದು ಮೂಲಗಳು ಹೇಳಿವೆ.   

Share this Story:

Follow Webdunia kannada

ಮುಂದಿನ ಸುದ್ದಿ

ಇವತ್ತಿಂದ ನಿಮ್ಮ ಯಡಿಯೂರಪ್ಪ ಮನೇಲಿ ಕುಳಿತುಕೊಳ್ಳುವ ಪ್ರಶ್ನೆಯೇ ಇಲ್ಲ-ಯಡಿಯೂರಪ್ಪ