Select Your Language

Notifications

webdunia
webdunia
webdunia
webdunia

ಇವತ್ತಿಂದ ನಿಮ್ಮ ಯಡಿಯೂರಪ್ಪ ಮನೇಲಿ ಕುಳಿತುಕೊಳ್ಳುವ ಪ್ರಶ್ನೆಯೇ ಇಲ್ಲ-ಯಡಿಯೂರಪ್ಪ

ಇವತ್ತಿಂದ ನಿಮ್ಮ ಯಡಿಯೂರಪ್ಪ ಮನೇಲಿ ಕುಳಿತುಕೊಳ್ಳುವ ಪ್ರಶ್ನೆಯೇ ಇಲ್ಲ-ಯಡಿಯೂರಪ್ಪ
bangalore , ಗುರುವಾರ, 7 ಸೆಪ್ಟಂಬರ್ 2023 (14:40 IST)
ಬೆಂಗಳೂರು ಡಾಲರ್ಸ್ ಕಾಲೋನಿ ಯಲ್ಲಿ ಮಾಜಿ ಸಿಎಂ ಬಿ ಎಸ್ ವೈ ಪ್ರತಿಕ್ರಿಯಿಸಿದ್ದು,ಇವತ್ತಿಂದ ನಿಮ್ಮ ಯಡಿಯೂರಪ್ಪ ಮನೇಲಿ ಕುಳಿತುಕೊಳ್ಳುವ ಪ್ರಶ್ನೆಯೇ ಇಲ್ಲ.ರಾಜ್ಯದ ಉದ್ದಗಲಕ್ಕೂ ಪ್ರವಾಸ ಹೋರಾಟ ಮಾಡಿ ಬರುವ ಲೋಕಸಭಾ ಚುನಾವಣೆ ಯಲ್ಲಿ ಕನಿಷ್ಠ 22-23ಸ್ಥಾನ ಗೆಲ್ಲಲೇಬೇಕು.ಆ ದಿಕ್ಕಿನಲ್ಲಿ ನಾನು ಏನು ಕೆಲಸ ಮಾಡಬೇಕೋ ಅದನ್ನು ಮಾಡ್ತೀನಿ.ಮೂರು ನಾಲ್ಕು ದಿನಗಳಲ್ಲಿ ನನ್ನ ಪ್ರವಾಸ ಪ್ರಾರಂಭ ಆರಂಭವಾಗುತ್ತದೆ ಎಂದು ಬೆಂಗಳೂರಲ್ಲಿ ಮಾಜಿ ಸಿಎಂ ಯಡಿಯೂರಪ್ಪ ಹೇಳಿದ್ದಾರೆ.
 
ನಾಳೆ  ಬೆಂಗಳೂರಲ್ಲಿ ಸರ್ಕಾರದ ಜನವಿರೋಧಿ ಆಡಳಿತ ವೈಖರಿ ವಿರುದ್ಧ ಹೋರಾಟ ಮಾಡ್ತಿದ್ದೇವೆ.ಬರಗಾಲ ತಾಂಡವಾಡ್ತಿದೆ, ವಿದ್ಯುತ್ ಕಣ್ಣ ಮುಚ್ಚಾಲೆ ಆಡ್ತಿದೆ. ರಾಜ್ಯದ ಅಭಿವೃದ್ಧಿ ಕುಂಠಿತವಾಗ್ತಿದೆ  ಇದಕ್ಕಾಗಿ ನಾಳೆ ರಾಜ್ಯಾದ್ಯಂತ ಹೋರಾಟ ಮಾಡ್ತಿದ್ದೇವೆ.ಸರ್ಕಾರ ಸಂಪೂರ್ಣವಾಗಿ ಭ್ರಷ್ಟಾಚಾರದಲ್ಲಿ ತೊಡಗಿದೆ.ಬರಗಾಲದಿಂದ ರಾಜ್ಯದ ಜನರು ಕಂಗಾಲಾಗಿದ್ದಾರೆ.ಕಾವೇರಿ ನೀರನ್ನು ತಮಿಳು ನಾಡಿಗೆ ಬಿಡ್ತಿದ್ದಾರೆ.ಕೆಆರ್ ಎಸ್ ಜಲಾಶಯ ಖಾಲಿ ಆಗ್ತಿದೆ.ನಮಗೆ ಕುಡಿಯೋಕೆ ನೀರು ಇಲ್ಲ.
 
ವಿದ್ಯುತ್ ದರ ಜಾಸ್ತಿ ಆಗ್ತಿದೆ.ವರ್ಗಾವಣೆ ದಂಧೆಯಲ್ಲೇ ಸರ್ಕಾರ ನಿರತವಾಗಿದೆ.ಗುತ್ತಿಗೆದಾರರು ಕಮಿಷನ್ ಬಗ್ಗೆ ಮಾತಾಡಿದ್ದಾರೆ, ಶಾಸಕರಿಗೆ ಅನುದಾನ ಕೊಡುತ್ತಿಲ್ಲ.ಕಿಸಾನ್ ಸಮ್ಮಾನ್ ಯೋಜನೆ ನಿಲ್ಲಿಸಿದ್ದಾರೆ.ನಮ್ಮ ಕಾರ್ಯಕರ್ತರ ಮೇಲೆ ಕೇಸ್ ಹಾಕಿ ಅನಗತ್ಯ ವಾಗಿ ದ್ವೇಷ ಸಾರುತ್ತಿದ್ದಾರೆ.ನಾಳೆ ಶಾಸಕರು, ಸಂಸದರು ಸೇರಿ 15ಸಾವಿರ ಜನರು ಸೇರಿಸಿ ಹೋರಾಟ ಮಾಡ್ತೀವಿ.ಭ್ರಷ್ಟಾಚಾರದಲ್ಲಿ ತೊಡಗಿರುವ ಸರ್ಕಾರದ ವಿರುದ್ಧ  ನಾವು ಹೋರಾಟ ಮಾಡ್ತಿದ್ದೇವೆ.ಈ ಹೋರಾಟ ಯಾವ ಸ್ವರೂಪಕ್ಕೆ ಹೋಗುತ್ತೋ ಗೊತ್ತಿಲ್ಲ.ಈ ಹೋರಾಟದಿಂದ ಕಾನೂನು ಸುವ್ಯವಸ್ಥೆ ಹದಗೆಟ್ಟರೂ ಅದಕ್ಕೆ ಸರ್ಕಾರವೇ ಜವಬ್ದಾರಿ ಎಂದು ರಾಜ್ಯ ಸರ್ಕಾರಕ್ಕೆ ಬಿಎಸ್ವೈ ಎಚ್ಚರಿಕೆ ನೀಡಿದ್ದಾರೆ.
 
ಬಿಜೆಪಿ ಶಾಸಕರು ಕಾಂಗ್ರೆಸ್ ಗೆ ಹೋಗೋ ವಿಚಾರ ನಮ್ಮ ಯಾವ ಶಾಸಕರು ಕಾಂಗ್ರೆಸ್ ಗೆ ಹೋಗೋದಿಲ್ಲ.ನಾನು ಪಕ್ಷದ ಶಾಸಕರ ಜೊತೆಗೆ ಮಾತಾಡಿದ್ದೇನೆ.ನಾಳೆ ಅವರು ಎಲ್ಲರು ಪ್ರತಿಭಟನೆ ಗೆ ಬರ್ತಾರೆ.ವಿಪಕ್ಷ ನಾಯಕ ಆಯ್ಕೆ
ಇವತ್ತು ನಾಳೆ ಮಾಡ್ತಾರೆ.ವಿರೋಧ ಪಕ್ಷದ ನಾಯಕ ಇಲ್ಲ ಅಂತ, ವಿಪಕ್ಷ ವಾಗಿ ಕೆಲಸಗಳು ನಿಂತಿಲ್ಲ.ನಾನು ರಾಜ್ಯ ಪ್ರವಾಸ ಮಾಡುತ್ತೇನೆ. ರಾಜ್ಯ ಪ್ರವಾಸ ಮಾಡಿ ಬರುವ ಲೋಕಸಭಾ ಚುನಾವಣೆಯಲ್ಲಿ  25ಕ್ಕೂ ಹೆಚ್ಚು ಸ್ಥಾನ ಗೆಲ್ಲುತ್ತೇವೆ ಎಂದು ಯಡಿಯೂರಪ್ಪ ಹೇಳಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ತನ್ನ ಸ್ವಾರ್ಥಕ್ಕೆ 14 ತಿಂಗಳ ಮಗುವನ್ನೇ ಕೊಂದ ತಂದೆ!?