ವಾಷಿಂಗ್ಟನ್ : ಅಮೆರಿಕದ ದಕ್ಷಿಣ ಕೆರೊಲಿನಾ ಪ್ರಾಂತ್ಯದಲ್ಲಿ ತನ್ನ ಫೈಟರ್ ಜೆಟ್ ಮೂಲಕ ಚೀನಾದ ಬೇಹುಗಾರಿಕಾ ಬಲೂನ್ ಅನ್ನು ಹೊಡೆದುರುಳಿಸಿತ್ತು. ಇದರಿಂದ ಚೀನಾ ಅಸಮಾಧಾನ ಹೊರಹಾಕಿತ್ತು.
ಈ ಕುರಿತು ಪ್ರತಿಕ್ರಿಯಿಸಿರುವ ಯುಎಸ್ ಅಧ್ಯಕ್ಷ ಜೋ ಬೈಡನ್, ಅಮೆರಿಕವು ಚೀನಾದೊಂದಿಗೆ ಸಂಘರ್ಷಕ್ಕಿಳಿಯಲು ಬಯಸುವುದಿಲ್ಲ ಎಂದು ಹೇಳಿದ್ದಾರೆ.
ಚೀನಾ ಸ್ಪೈ ಬಲೂನ್ ಕೇವಲ ಹವಾಮಾನ ಸಂಶೋಧನೆ ನಡೆಸುತ್ತಿದೆ ಎಂದು ಹೇಳಿಕೊಂಡಿದೆ. ಆದ್ರೆ ಪೆಂಟಗನ್ ಇದನ್ನ ಉನ್ನತ ಬೇಹುಗಾರಿಕಾ ಕಾರ್ಯಾಚರಣೆ ಎಂದು ತಿಳಿಸಿದೆ. ಯುಎಸ್ ನೌಕಾಪಡೆಯು ಈ ಬಗ್ಗೆ ವಿಶ್ಲೇಷಣೆ ನಡೆಸಲು ಅಟ್ಲಾಂಟಿಕ್ ಸಾಗರದಿಂದ ಅವಶೇಷಗಳನ್ನ ತರಿಸಿಕೊಳ್ಳುತ್ತಿದೆ ಎಂದು ಹೇಳಿದ್ದಾರೆ.