Publish Date: Mon, 30 Jan 2023 (10:57 IST)
Updated Date: Mon, 30 Jan 2023 (11:00 IST)
ಶ್ರೀನಗರ : ಚೀನಾ ಗಡಿ ಸಂಘರ್ಷ ವಿಚಾರದಲ್ಲಿ ಭಾರತ ಕೇಂದ್ರ ಸರ್ಕಾರ ಅನುಸರಿಸುತ್ತಿರುವ ವಿಧಾನ ಅತ್ಯಂತ ಅಪಾಯಕಾರಿಯಾಗಿದೆ.
ಇದು ಚೀನಾ ತನ್ನ ಆಕ್ರಮಣಕಾರಿ ಕೆಲಸಗಳನ್ನ ಮುಂದುವರಿಸಲು ಆತ್ಮವಿಶ್ವಾಸ ಹೆಚ್ಚಿಸುವಂತೆ ಮಾಡುತ್ತದೆ ಎಂದು ಕಾಂಗ್ರೆಸ್ ನಾಯಕ ರಾಹುಲ್ಗಾಂಧಿ ಎಚ್ಚರಿಸಿದ್ದಾರೆ.
ಚೀನಾ ಗಡಿ ಸಂಘರ್ಷದ ಬಗ್ಗೆ ವಿದೇಶಾಂಗ ವ್ಯವಹಾರಗಳ ಸಚಿವ ಎಸ್.ಜೈಶಂಕರ್ ಸ್ಪಷ್ಟನೆ ನೀಡಿದ ಒಂದು ದಿನದ ನಂತರ ರಾಹುಲ್ ಹಾಂಧಿ ಮತ್ತೊಮ್ಮೆ ಲಡಾಖ್ನ ವಿಷಯ ಪ್ರಸ್ತಾಪಿಸಿದ್ದಾರೆ.
ಜಮ್ಮು ಮತ್ತು ಕಾಶ್ಮೀರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿರುವ ಗಾಂಧಿ, ಲಡಾಖ್ನ ಸುಮಾರು 2 ಸಾವಿರ ಚದರ ಕಿ.ಮೀ ಭಾರತೀಯ ಭೂಭಾಗವು ಚೀನಾದ ವಶದಲ್ಲಿದೆ ಎಂದು ಒತ್ತಿ ಹೇಳಿದ್ದಾರೆ.