Publish Date: Wed, 15 Dec 2021 (12:01 IST)
Updated Date: Wed, 15 Dec 2021 (12:04 IST)
ಮುಂಬೈ : ತನ್ನ ಪ್ರೇಮಿಯನ್ನು ಮದುವೆಯಾಗಲು ಯುವತಿ ಗ್ಯಾಂಗ್ ರೇಪ್ ಕಥೆ ಕಟ್ಟಿರುವ ಘಟನೆ ನಾಗ್ಪುರದಲ್ಲಿ ನಡೆದಿದೆ.
ಪ್ರಿಯಕರನ ಜೊತೆಗೆ ವಿವಾಹವಾಗಲು 19 ವರ್ಷದ ಯುವತಿ ತನ್ನ ಮೇಲೆ ಗ್ಯಾಂಗ್ ರೇಪ್ ನಡೆದಿರುವುದಾಗಿ ಸುಳ್ಳು ದೂರು ನೀಡಿದ್ದಾಳೆ. ಇದಕ್ಕಾಗಿ ನಾಗ್ಪುರ ಪೊಲೀಸ್ ಕಮಿಷನರ್ ಸೇರಿ 1 ಸಾವಿರ ಪೊಲೀಸರು ದಿನ ಪೂರ್ತಿ ತನಿಖೆ ನಡೆಸಿದ್ದಾರೆ.
ನಂತರ ಸಿ.ಸಿ.ಟಿವಿ ದೃಶ್ಯವಳಿಗಳಿಂದ ಆಕೆ ಕಥೆಕಟ್ಟಿದ್ದಾಳೆ ಎಂಬುದು ಬೆಳಕಿಗೆ ಬಂದಿದೆ. ಡಿ.13 ರಂದು ಪೊಲೀಸ್ ಠಾಣೆಗೆ ಬಂದ ಯುವತಿ ವಿಳಾಸ ಕೇಳುವ ನೆಪದಲ್ಲಿ ನನ್ನನ್ನು ಅಪಹರಣ ಮಾಡಿದ್ದರು. ನಂತರ ನನ್ನ ಮೇಲೆ ಅತ್ಯಾಚಾರ ಮಾಡಿದ್ದಾರೆ. ತಕ್ಷಣ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದ್ದಾಳೆ.
ಪೊಲೀಸರು 40 ತಂಡ ರಚಿಸಿ ತನಿಖೆ ಆರಂಭಿಸಿದ್ದು, 250 ಸಿಸಿಟಿವಿಗಳನ್ನು ಪರಿಶೀಲಿಸಿದ್ದಾರೆ. ನಂತರ ಪೊಲೀಸರು ಯುವತಿಯನ್ನು ಪ್ರಶ್ನಿಸಿದಾಗ ಯುವತಿ ತನ್ನ ಪ್ರೇಮಿಯನ್ನು ಮದುವೆಯಾಗಲು ಗ್ಯಾಂಗ್ ರೇಪ್ ಕಥೆ ಕಟ್ಟಿರುವುದಾಗಿ ಹೇಳಿಕೊಂಡಿದ್ದಾಳೆ.