Select Your Language

Notifications

webdunia
webdunia
webdunia
webdunia

ಈ ಬ್ರಾ ಮಹಿಳೆಯರಲ್ಲಿ ಸ್ತನ ಕ್ಯಾನ್ಸರ್ ಪತ್ತೆಹಚ್ಚುತ್ತದಂತೆ!

ಈ ಬ್ರಾ ಮಹಿಳೆಯರಲ್ಲಿ ಸ್ತನ ಕ್ಯಾನ್ಸರ್ ಪತ್ತೆಹಚ್ಚುತ್ತದಂತೆ!
ತಿರುವನಂತರಪುರಂ , ಶುಕ್ರವಾರ, 8 ಮಾರ್ಚ್ 2019 (10:40 IST)
ತಿರುವನಂತರಪುರಂ: ಮಹಿಳೆಯರಲ್ಲಿ ಸ್ತನ ಕ್ಯಾನ್ಸರ್ ಪತ್ತೆ ಹಚ್ಚುವ ವಿಶೇಷ ಬ್ರಾ ತಯಾರು ಮಾಡಿದ ಕೇರಳ ಮೂಲದ ವಿಜ್ಞಾನಿಗೆ ನಾರಿ ಶಕ್ತಿ ಪ್ರಶಸ್ತಿ ಲಭಿಸಿದೆ.


ಡಾ. ಎ ಸೀಮಾ ಎಂಬವರು ಈ ವಿಶೇಷ ಸಂಶೋಧನೆ ಮಾಡಿ ಪ್ರಶಸ್ತಿ ಪಡೆದಿದ್ದಾರೆ. ತ್ರಿಶ್ಶೂರ್ ನ ಸಿ-ಮೆಟ್ ನಲ್ಲಿ ವಿಜ್ಞಾನಿಯಾಗಿರುವ ಸೀಮಾ ಸ್ತನ ಕ್ಯಾನ್ಸರ್ ನ್ನು ಪತ್ತೆ ಮಾಡಲು ಸುಲಭವಾಗುವಂತಹ ತಂತ್ರಜ್ಞಾನ ಇರುವ ಬ್ರಾ ಸಂಶೋಧಿಸಿದ್ದಾರೆ.

ಮಹಿಳಾ ದಿನಾಚರಣೆಯ ದಿನವಾದ ಇಂದು ಭಾರತದಲ್ಲಿ ಮಹಿಳೆಯರಿಗೆ ನೀಡಲಾಗುವ ಅತ್ಯುನ್ನತ ‘ನಾರಿ ಶಕ್ತಿ’ ಪ್ರಶಸ್ತಿಗೆ ಸೀಮಾ  ಭಾಜನರಾಗಿದ್ದಾರೆ. ವಿಶೇಷ ಸೆನ್ಸಾರ್ ಅಳವಡಿಸಲಾಗಿರುವ ಈ ಬ್ರಾ ಧರಿಸಿದರೆ ಮಹಿಳೆಯರಲ್ಲಿ ಕ್ಯಾನ್ಸರ್ ಕೋಶಗಳ ಉಷ್ಣಾಂಶ ಏರುಪೇರು ಲೆಕ್ಕಾಚಾರ ಹಾಕಿ ಸ್ತನ ಕ್ಯಾನ್ಸರ್ ಇದೆಯೋ ಇಲ್ಲವೋ ಎಂದು ಪತ್ತೆಹಚ್ಚಲು ಸಾಧ್ಯವಾಗುತ್ತದೆ. ಈ ವಿಶೇಷ ಸಂಶೋದನೆಗೆ ಸೀಮಾಗೆ ಪ್ರಶಸ್ತಿ ಸಂದಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ಲೋಕಸಭೆ ಚುನಾವಣೆ: ಮೊದಲ ಪಟ್ಟಿಯಲ್ಲಿ ರಾಹುಲ್, ಸೋನಿಯಾ ಗಾಂಧಿ