Select Your Language

Notifications

webdunia
webdunia
webdunia
webdunia

ಕೇರಳದಲ್ಲೊಂದು ಬೆಚ್ಚಿ ಬೀಳಿಸುವ ಘಟನೆ!

ಕೇರಳದಲ್ಲೊಂದು ಬೆಚ್ಚಿ ಬೀಳಿಸುವ ಘಟನೆ!
ಕೇರಳ , ಬುಧವಾರ, 27 ಅಕ್ಟೋಬರ್ 2021 (19:08 IST)
ಕೇರಳ  : 15 ವರ್ಷದ ಅಪ್ರಾಪ್ತ ಬಾಲಕನೊಬ್ಬ 23 ವರ್ಷದ ಮಹಿಳೆಯನ್ನು ಹಿಂಬಾಲಿಸಿಕೊಂಡು ಹೋಗಿ ಅತ್ಯಾಚಾರಕ್ಕೆ ಯತ್ನಿಸಿದ ಭಯಾನಕ ಘಟನೆ ಕೇರಳದ ಕೊಂಡೊಟ್ಟಿ ನಗರದಲ್ಲಿ ನಡೆದಿದೆ.
ನಡೆದುಕೊಂಡು ಹೋಗುತ್ತಿದ್ದ ಮಹಿಳೆಯನ್ನು ಹಿಂಬಾಲಿಸಿದ ಅಪ್ರಾಪ್ತ ಬಾಲಕ ಆಕೆ ಪ್ರತಿರೋಧ ತೋರಿ ಓಡಿ ಹೋಗಲು ಮುಂದಾದ ಆಕೆ ಮೇಲೆ ಅಮಾನುಷವಾಗಿ ಹಲ್ಲೆ ನಡೆಸಿದ್ದಾನೆ.
ಮಹಿಳೆಯನ್ನು ಹಿಂಬಾಲಿಸಿದ ಬಾಲಕ ಆಕೆ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ್ದಾನೆ. ಈ ವೇಳೆ ಮಹಿಳೆ ತಪ್ಪಿಸಿಕೊಂಡು ಓಡಲು ಮುಂದಾಗಿದ್ದಾಳೆ. ಆದರೂ ಬಿಡದ ಆತ ಆಕೆಯ ಕೈಗಳನ್ನು ಹಟ್ಟಿ ಹಲ್ಲಿನಿಂದ ಹಲ್ಲೆ ನಡೆಸಿದ್ದಾನೆ.
ಆರೋಪಿ 10ನೇ ತರಗತಿ ವಿದ್ಯಾರ್ಥಿಯಾಗಿದ್ದು, ರಾಜ್ಯ ಮಟ್ಟದ ಜೂಡೋ ಚಾಂಪಿಯನ್ ಆಗಿದ್ದಾನೆ. ಮಹಿಳೆ ನೀಡಿದ ಹೇಳಿಕ ಮತ್ತು ಸಿಸಿಟಿವಿ ದೃಶ್ಯಗಳಿಂದ ಆತನ ಕೃತ್ಯ ಪತ್ತೆಯಾಗಿದ್ದು, ಆತನನ್ನು ಬಂಧಿಸಲಾಗಿದೆ. ಆತ ಕೂಡ ಅಪರಾಧವನ್ನು ಒಪ್ಪಿಕೊಂಡಿದ್ದು, ಆತನನ್ನು ಬಾಲ ನ್ಯಾಯ ಮಂಡಳಿಯ ಮುಂದೆ ಹಾಜರುಪಡಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.
23 ವರ್ಷದ ಯುವತಿ ಸೋಮವಾರ ತಡರಾತ್ರಿ ತನ್ನ ಮನೆಯಿಂದ ಕೊಟ್ಟುಕ್ಕರ ಜಂಕ್ಷನ್ ಕಡೆಗೆ ತಾನು ಓದುತ್ತಿರುವ ಕೊಂಡೊಟ್ಟಿಯಲ್ಲಿರುವ ಕಂಪ್ಯೂಟರ್ ಸೆಂಟರ್ಗೆ ತೆರಳುತ್ತಿದ್ದಾಗ ಈ ಘಟನೆ ನಡೆದಿದೆ.
ಆಕೆಯನ್ನು ಹಿಂಬಾಲಿಸಿದ ಹುಡುಗ ಅವಳನ್ನು ಹೊಲಕ್ಕೆ ಎಳೆದೊಯ್ದು, ಅತ್ಯಾಚಾರ ಯತ್ನಕ್ಕೆ ಮುಂದಾಗಿದ್ದ. ಈ ವೇಳೆ ಆಕೆಯ ಮುಖವನ್ನು ಕಲ್ಲಿನಿಂದ ಜಜ್ಜಿದ್ದಾನೆ.
ಹುಡುಗಿಯ ಮುಖ ಊದಿಕೊಂಡಿದೆ. ಆರೋಪಿ ಆಕೆಯ ಉಡುಪನ್ನು ಹರಿದು ಹಾಕಿದ್ದ. ಗಾಯಾಳು ಯುವತಿಗೆ ಪ್ರಥಮ ಚಿಕಿತ್ಸೆ ನೀಡಿ ಕೊಂಡೊಟ್ಟಿ ತಾಲೂಕು ಆಸ್ಪತ್ರೆಗೆ ರವಾನಿಸಿ ನಂತರ ಮಂಜೇರಿ ಮೆಡಿಕಲ್ ಕಾಲೇಜು ಆಸ್ಪತ್ರೆಗೆ ರವಾನಿಸಲಾಗಿದೆ ಎಂದು ಕೌನ್ಸಿಲರ್ ತಿಳಿಸಿದ್ದಾರೆ.


Share this Story:

Follow Webdunia kannada

ಮುಂದಿನ ಸುದ್ದಿ

ಕನ್ನಡ ರಾಜ್ಯೋತ್ಸವಕ್ಕೆ ಭರ್ಜರಿ ತಯಾರಿ