Select Your Language

Notifications

webdunia
webdunia
webdunia
webdunia

ಸುಸ್ಥಿರ ಸಾರಿಗೆ ಪ್ರಶಸ್ತಿ ಪಡೆದ ನಗರ ನಿಮಗೆ ಗೊತ್ತೇ? ತಿಳಿಯಿರಿ

ಸುಸ್ಥಿರ ಸಾರಿಗೆ ಪ್ರಶಸ್ತಿ ಪಡೆದ ನಗರ  ನಿಮಗೆ ಗೊತ್ತೇ? ತಿಳಿಯಿರಿ
ಕೇರಳ , ಸೋಮವಾರ, 25 ಅಕ್ಟೋಬರ್ 2021 (18:31 IST)
ಕೇರಳ,ಅ.25 : 'ಅತ್ಯಂತ ಸುಸ್ಥಿರ ಸಾರಿಗೆ ವ್ಯವಸ್ಥೆಯನ್ನು ಹೊಂದಿರುವ ನಗರ ' ಪ್ರಶಸ್ತಿಯನ್ನು ಕೇರಳವು ಗೆದ್ದುಕೊಂಡಿದೆ ಎಂದು ರಾಜ್ಯದ ಸಾರಿಗೆ ಸಚಿವ ಆಯಂಟನಿ ರಾಜು ಅವರು ಇಲ್ಲಿ ತಿಳಿಸಿದರು.
ಅ.29ರಂದು ದಿಲ್ಲಿಯಲ್ಲಿ ಕೇಂದ್ರ ವಸತಿ ಮತ್ತು ನಗರ ವ್ಯವಹಾರಗಳ ಸಚಿವ ಹರ್ದೀಪ ಸಿಂಗ್ ಪುರಿ ಅವರು ಪ್ರಶಸ್ತಿಯನ್ನು ಪ್ರದಾನ ಮಾಡಲಿರುವರು.
ಕೊಚ್ಚಿ ನಗರದಲ್ಲಿ ಸಾರಿಗೆ ಸೌಲಭ್ಯಗಳನ್ನು ಹೆಚ್ಚಿಸಲು ಜಾರಿಗೊಳಿಸಲಾಗಿರುವ ಕೊಚ್ಚಿ ಮೆಟ್ರೊ,ವಾಟರ್ ಮೆಟ್ರೊ ಮತ್ತು ಇ-ಮೊಬಿಲಿಟಿಯಂತಹ ಯೋಜನೆಗಳನ್ನು ಗುರುತಿಸಿ ಈ ಪ್ರಶಸ್ತಿಯನ್ನು ನೀಡಲಾಗಿದೆ, ವಿವಿಧ ಸಾರಿಗೆ ಸೌಲಭ್ಯಗಳನ್ನು ಡಿಜಿಟಲೀಕರಣ ಮತ್ತು ಏಕತ್ರಗೊಳಿಸಿರುವ ಕೊಚ್ಚಿ ಓಪನ್ ಮೊಬಿಲಿಟಿ ನೆಟ್ವರ್ಕ್ನ ರಚನೆಯೂ ಪ್ರಶಸ್ತಿಯನ್ನು ಗೆಲ್ಲಲು ನೆರವಾಗಿದೆ ಎಂದು ಸಚಿವರು ತಿಳಿಸಿದರು.
ದೇಶದಲ್ಲಿಯ ವಿವಿಧ ರಾಜ್ಯಗಳು ಮತ್ತು ಕೇಂದ್ರ ಆಡಳಿತ ಪ್ರದೇಶಗಳಲ್ಲಿಯ ಸಾರಿಗೆ ಸೌಲಭ್ಯಗಳನ್ನು ಗುರುತಿಸಿ ಈ ಪ್ರಶಸ್ತಿಯನ್ನು ನೀಡಲಾಗುತ್ತದೆ.


Share this Story:

Follow Webdunia kannada

ಮುಂದಿನ ಸುದ್ದಿ

ದಾಸರಹಳ್ಳಿ ಶಾಸಕ ಮಂಜುನಾಥ್ ಬಂಧನ